ಮಡಿಕೇರಿ, ಡಿ. ೨೮: ಕೊಡಗು ಗೌಡ ಸಮಾಜದಲ್ಲಿ ೨೦೨೧ನೇ ಇಸವಿಯ ಕ್ಯಾಲೆಂಡರ್ ಅನ್ನು ಸಮಾಜದ ಅಧ್ಯಕ್ಷ ತೋಟಂಬೈಲು ಮನೋಹರ್ ಅವರ ನೇತೃತ್ವದಲ್ಲಿ, ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಬಿಡುಗಡೆ ಮಾಡಿದರು.
ನಗರ ಪಾಲಿಕೆ ಸದಸ್ಯರಾದ ಶ್ರೀಧರ್, ಸುಬ್ಬಯ್ಯ ಮತ್ತು ಕಾರ್ಯಕಾರಿ ಮಂಡಳಿಯವರು ಹಾಗೂ ಸದಸ್ಯರುಗಳು ಹಾಜರಿದ್ದರು. ಹಾಜರಿದ್ದ ಪ್ರಾಯೋಜಕರಿಗೆ ಕ್ಯಾಲೆಂಡರ್ ವಿತರಿಸಲಾಯಿತು.