ಶನಿವಾರಸಂತೆ, ಡಿ. ೨೮: ಪಟ್ಟಣದ ರೋಟರಿ ಸಂಸ್ಥೆ ವತಿಯಿಂದ ಕೊರೊನಾ ಜಾಗೃತಿಗಾಗಿ ಸೈಕಲ್ ಜಾಥಾ ಹಮ್ಮಿಕೊಂಡಿದ್ದು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಲ್ಲಿ ಅಂತರರಾಷ್ಟಿçÃಯ ಸೈಕಲ್ ಪಟು ಕೆ.ಎನ್. ರಜನೀಶ್ ಜಾಥಾಕ್ಕೆ ಚಾಲನೆ ನೀಡಿದರು.
ಜಾಥಾದಲ್ಲಿ ಮಾಸ್ಕ್ ಧರಿಸುವ, ಸ್ಯಾನಿಟೈಸರ್ ಬಳಸುವ ಹಾಗೂ ಅಂತರ ಕಾಯ್ದುಕೊಳ್ಳುವ ಧ್ಯೇಯದೊಂದಿಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಯಿತು. ಜಾಥಾದಲ್ಲಿ ೫೦ ಮಂದಿ ಪಾಲ್ಗೊಂಡಿದ್ದು, ಶನಿವಾರಸಂತೆಯಿAದ ಹೊರಟು ದುಂಡಳ್ಳಿ, ಮಾದ್ರೆ, ಎಡೇಹಳ್ಳಿ, ಕಾಜೂರು ಮಾರ್ಗವಾಗಿ ಸಾಗಿ ಪಟ್ಟಣದ ನಂದೀಶ್ವರ ಕಲ್ಯಾಣ ಮಂಟಪಕ್ಕೆ ಬಂದು ಸೇರಲಾಯಿತು.
ರೋಟರಿ ಸಂಸ್ಥೆ ಅಧ್ಯಕ್ಷ ಹೆಚ್.ವಿ. ದಿವಾಕರ್, ಕಾರ್ಯದರ್ಶಿ ಎ.ಡಿ. ಮೋಹನ್ಕುಮಾರ್, ಸದಸ್ಯರು, ಉಪ ರಾಜ್ಯಪಾಲ ಪಿ.ಕೆ. ರವಿ ಇತರರು ಹಾಜರಿದ್ದರು.