ಮಡಿಕೇರಿ, ಡಿ. ೨೯: ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ ತಾ. ೨೨ ಹಾಗೂ ೨೭ ರಂದು ನಡೆದಿರುವ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ತಾ. ೩೦ ರಂದು (ಇಂದು) ನಡೆಯಲಿದ್ದು, ಈ ಫಲಿತಾಂಶದೊAದಿಗೆ ಮುಂದಿನ ಐದು ವರ್ಷಗಳ ಅವಧಿಯ ಗ್ರಾ.ಪಂ. ಪ್ರತಿನಿಧಿಗಳ ನಿರ್ಧಾರವಾಗಲಿದೆ.ಜಿಲ್ಲೆಯ ಒಟ್ಟು ೧೦೪ ಗ್ರಾ.ಪಂ.ಗಳ ಪೈಕಿ ಈ ಬಾರಿ ೧೦೧ ಪಂಚಾಯಿತಿಗಳಿಗೆ ಚುನಾವಣೆ ನಡೆದಿದೆ.(ಮೊದಲ ಪುಟದಿಂದ) ಮಡಿಕೇರಿ ತಾಲೂಕಿನ ೨೬, ಸೋಮವಾರಪೇಟೆ ತಾಲೂಕಿನ ೪೦ ಹಾಗೂ ವೀರಾಜಪೇಟೆ ತಾಲೂಕಿನ ೩೫ ಪಂಚಾಯಿತಿಗಳಿಗೆ ಮತಸಮರ ನಡೆದಿದ್ದು, ಫಲಿತಾಂಶಕ್ಕಾಗಿ ಭಾರೀ ಕುತೂಹಲ ಸೃಷ್ಟಿಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಒಟ್ಟು ೧೦೮ ಕ್ಷೇತ್ರಗಳ ೨೬೭ ಸ್ಥಾನಕ್ಕೆ ಚುನಾವಣೆ ನಡೆದಿದೆ. ಈ ಸ್ಥಾನಕ್ಕೆ ೬೭೬ ಮಂದಿ ಕಣದಲ್ಲಿದ್ದಾರೆ.ಸೋಮವಾರಪೇಟೆ ತಾಲೂಕಿನಲ್ಲಿ ೧೭೭ ಕ್ಷೇತ್ರಗಳ ೪೬೨ ಸ್ಥಾನಕ್ಕೆ ಮತದಾನವಾಗಿದ್ದು, ಒಟ್ಟು ೧೪೮೮ ಅಭ್ಯರ್ಥಿಗಳು ಕಣದಲ್ಲಿದ್ದಾರೆ.ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು ೧೫೦ ಕ್ಷೇತ್ರಗಳ ೪೨೪ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇಲ್ಲಿ ೯೨೪ ಅಭ್ಯರ್ಥಿಗಳು ಸ್ಥರ್ಧೆಯಲ್ಲಿದ್ದಾರೆ.

ಈ ಚುನಾವಣಾ ಫಲಿತಾಂಶ ಕೇವಲ ಅಭ್ಯರ್ಥಿಗಳಿಗೆ ಮಾತ್ರವಲ್ಲದೆ, ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ವಿಚಾರವಾಗಿದ್ದು, ಫಲಿತಾಂಶಕ್ಕಾಗಿ ಕಾತರ ಹೆಚ್ಚಾಗಿದೆ. ಎಲ್ಲ ಅಭ್ಯರ್ಥಿಗಳು ತಾವು ಎದುರಿಸಿರುವ ‘ಪರೀಕ್ಷೆ’ಯ ಫಲಿತಾಂಶಕ್ಕಾಗಿ ತುದಿಗಾಲಲ್ಲಿ ನಿಂತಿದ್ದು, ಎದೆಯಲ್ಲಿ ಢವಢವ ಶುರುವಿಟ್ಟುಕೊಂಡಿದೆ.

ನಿರಾಳತೆಯಲ್ಲಿ ಅವಿರೋಧ ಆಯ್ಕೆಗೊಂಡವರು

ಪ್ರಸಕ್ತ ನಿಗದಿಯಾಗಿದ್ದ ಚುನಾವಣೆಯಲ್ಲಿ ಜಿಲ್ಲೆಯ ಮೂರು ತಾಲೂಕಿನಲ್ಲೂ ಒಂದಷ್ಟು ಮಂದಿ ಪ್ರತಿಸ್ಪರ್ಧೆಯಿಲ್ಲದೆ ಅವಿರೋಧವಾಗಿ ಆಯ್ಕೆಗೊಂಡಿದ್ದು, ಇವರುಗಳು ನಿರಾಳತೆಯಲ್ಲಿದ್ದಾರೆ.

ಮಡಿಕೇರಿ ತಾಲೂಕಿನಲ್ಲಿ ೨೪ ಅಭ್ಯರ್ಥಿಗಳು, ಸೋಮವಾರಪೇಟೆ ತಾಲೂಕಿನಲ್ಲಿ ೧೯ ಮಂದಿ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು ೫೪ ಅಭ್ಯರ್ಥಿಗಳು ಸೇರಿದಂತೆ ಒಟ್ಟು ೯೭ ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಗೊಂಡಿರುವುದು ಈ ಬಾರಿಯ ವಿಶೇಷತೆಯಾಗಿದೆ.ಮತ ಎಣಿಕೆಗೆ ವ್ಯವಸ್ಥೆ

ಮಡಿಕೇರಿ ತಾಲೂಕಿಗೆ ಸಂಬAಧಿಸಿದAತೆ ಮಡಿಕೇರಿಯ ಸಂತ ಜೋಸೆಫರ ಶಾಲೆ, ಸೋಮವಾರಪೇಟೆ ತಾಲೂಕಿಗೆ ಕುಶಾಲನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವೀರಾಜಪೇಟೆಗೆ ವೀರಾಜಪೇಟೆ ಜೂನಿಯರ್ ಕಾಲೇಜು ಮತ ಎಣಿಕಾ ಕೇಂದ್ರಗಳಾಗಿವೆ.

ಈ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಭದ್ರತಾ ವ್ಯವಸ್ಥೆಗಾಗಿ ಸುಸೂತ್ರ ಮತ ಎಣಿಕೆಗಾಗಿ ಜಿಲ್ಲಾಡಳಿತ ಹಾಗೂ ನಿಯೋಜಿತ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಬಹುತೇಕ ಸಂಜೆವೇಳೆಗೆ ನಿಖರ ಫಲಿತಾಂಶ ಹೊರ ಬೀಳಲಿದೆ.

ಸಾಮಾನ್ಯ ಕ್ಷೇತ್ರ: ಅಭ್ಯರ್ಥಿ ಫಲಿತಾಂಶ ವಿಳಂಬ

ಗ್ರಾ.ಪA. ಚುನಾವಣೆಯ ಮತ ಎಣಿಕೆ ಸಂದರ್ಭ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಬಿಸಿಎಂ(ಎ), ಬಿಸಿಎಂ (ಬಿ) ಮುಂತಾದ ಮೀಸಲು ಕ್ಷೇತ್ರಗಳ ಅಭ್ಯರ್ಥಿಗಳ ಮತ ಎಣಿಕೆಗೆ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ಸಾಮಾನ್ಯ ಕ್ಷೇತ್ರಗಳ ಮತ ಎಣಿಕೆ ಸಹಜವಾಗಿಯೇ ತಡವಾಗಲಿದೆ.

ಮತ ಎಣಿಕೆ ಸಂದರ್ಭ ಮೀಸಲು ಕ್ಷೇತ್ರದಲ್ಲಿ ಪರಾಭವಗೊಂಡ ಅಭ್ಯರ್ಥಿಯನ್ನು ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪರಿಗಣಿಸಲಾಗು ತ್ತದೆ. ಆದುದರಿಂದ ಮೀಸಲು ಕ್ಷೇತ್ರದಲ್ಲಿ ಪರಾಭವಗೊಂಡ ಅಭ್ಯರ್ಥಿ ಸಾಮಾನ್ಯ ಕ್ಷೇತ್ರದಲ್ಲಿ ವಿಜೇತನಾದ ಅಭ್ಯರ್ಥಿಗಿಂತ ಹೆಚ್ಚಿನ ಮತಗಳನ್ನು ಪಡೆದಿದ್ದಲ್ಲಿ ಆತನನ್ನೇ ವಿಜೇತನನ್ನಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಇಲ್ಲಿ ಗೆದ್ದ ಸಾಮಾನ್ಯ ಅಭ್ಯರ್ಥಿ ಸೋಲ ನುಭವಿಸುತ್ತಾನೆ. ಈ ಚುನಾವಣೆಯ ಕೆಲವು ಕ್ಷೇತ್ರಗಳಲ್ಲಿ ಸೋತವನು ಗೆದ್ದ; ಗೆದ್ದವನು ಸೋತ ಎಂಬ ಸೋಜಿಗ ನಡೆಯುವ ಸಾಧ್ಯತೆ ಇದೆ.