ಭಾಗಮAಡಲ, ಡಿ. ೨೯ : ಕಡಿಯತ್ತೂರು ಗ್ರಾಮದಿಂದ ಕಾರುಗುಂದ ಮಾರ್ಗವಾಗಿ ಕೊಟ್ಟಮುಡಿಗೆ ಅಕ್ರಮವಾಗಿ ಲಾರಿಯೊಂದರಲ್ಲಿ ಮರ ಸಾಗಾಟವಾಗುವ ಖಚಿತ ವರ್ತಮಾನದ ಮೇರೆಗೆ ಮಡಿಕೇರಿ ವಿಭಾಗದ ಅಧಿಕಾರಿಗಳಾದ ಡಿ.ಸಿ.ಎಫ್. ಪ್ರಭಾಕರನ್, ಎ.ಸಿ.ಎಫ್. ನೀಲೇಶ್ ಸಿಂಧೆ, ಪ್ರೊಬೆಷನರಿ ಎ.ಸಿ.ಎಫ್. ನವೀನ್ ಹಾಗೂ ರೇಂಜರ್ ದೇವರಾಜ್ ಅವರ ಮಾರ್ಗದರ್ಶನದಲ್ಲಿ ಭಾಗಮಂಡಲ ಉಪವಲಯ ಅರಣ್ಯಾಧಿಕಾರಿ ಮಂಜುನಾಥ ನಾಯ್ಕ್ ನೇತೃತ್ವದಲ್ಲಿ ಕಡಿಯತ್ತೂರು ಗ್ರಾಮದ ರಸ್ತೆಯಲ್ಲಿ ಟಿಪ್ಪರ್ ಲಾರಿಯನ್ನು ತಡೆಯಲಾಗಿದೆ. ಲಾರಿಯಲ್ಲಿ ಅಕ್ರಮ ಹೆಬ್ಬಲಸು, ೮ ನಾಟಗಳಿದ್ದು, ಆರೋಪಿಗಳಾದ ಎಮ್ಮೆಮಾಡಿನ ಅಶ್ರಫ್, ಸೈಯದ್ ಕೆ.ವೈ.ರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಮತ್ತೋರ್ವ ಪ್ರಮುಖ ಆರೋಪಿ ಅಬ್ದುಲ್ಲಾ ಕೆ.ಕೆ. ವಾಹನದಿಂದ ಜಿಗಿದು ಪರಾರಿಯಾಗಿ ದ್ದಾನೆ. ದಾಳಿಯಲ್ಲಿ ಅರಣ್ಯ ರಕ್ಷಕರಾದ ಸದಾನಂದ, ಸಚಿನ್ ಪೊಲೂರು, ವಾಹನ ಚಾಲಕ ದೇವಾನಂದ ಹಾಗೂ ಪರಿಶತ್, ಅರಣ್ಯ ವೀಕ್ಷಕ ವಾಸುದೇವ ಹಾಗೂ ಆರ್‌ಆರ್‌ಟಿ ಸಿಬ್ಬಂದಿಗಳಾದ ದುರ್ಗಾ, ಸುಮೇಶ, ದೇವಿಪ್ರಸಾದ್ ಪಾಲ್ಗೊಂಡಿದ್ದರು.