ಕುಶಾಲನಗರ, ಡಿ. ೨೭: ಕುಶಾಲನಗರದ ಆಂಜನೇಯ ದೇವಾಲಯದಲ್ಲಿ ೩೫ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮಗಳು ಜರುಗಿದವು.

ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ಆಂಜನೇಯ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗ್ಗೆ ಆಂಜನೇಯ ಮೂರ್ತಿಗೆ ಅಭಿಷೇಕ ಕಾರ್ಯಕ್ರಮ ನಂತರ ಉತ್ಸವ ಮೂರ್ತಿಯೊಂದಿಗೆ ಕುಶಾಲನಗರದ ರಥಬೀದಿಯಲ್ಲಿ ಮೆರವಣಿಗೆ ನಡೆಯಿತು. ಗಣಪತಿ ದೇವಾಲಯದ ತನಕ ಮೆರವಣಿಗೆ ಬಂದು ಪೂಜೆ ಸಲ್ಲಿಸಿ ನಂತರ ಹಿಂತಿರುಗಿ ಆಂಜನೇಯ ದೇವಾಲಯಕ್ಕೆ ಬಂದು ಮಹಾ ಮಂಗಳಾರತಿ ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

ಕೋವಿಡ್ ೧೯ ಹಿನ್ನಲೆಯಲ್ಲಿ ಈ ಬಾರಿಯ ಉತ್ಸವ ಸರಳವಾಗಿ ನಡೆಸಲಾಯಿತು ಎಂದು ದೇವಾಲಯದ ಪ್ರಮುಖರು ಹಾಗೂ ಪ್ರಧಾನ ಅರ್ಚಕರಾದ ಡಾ. ರಾಧಾಕೃಷ್ಣ ತಿಳಿಸಿದರು. ದೇವಾಲಯ ಸಮಿತಿ ಪ್ರಮುಖರಾದ ವಿ.ಡಿ.ಪುಂಡರೀಕಾಕ್ಷ, ರಾಜೀವ್, ಉತ್ಸವ ಸಮಿತಿಯ ಪ್ರಶಾಂತ್, ನವನೀತ್, ರಾಜೀವ್, ಅನುದೀಪ್ ಮತ್ತಿತರರು ಇದ್ದರು.