ಗೋಣಿಕೊಪ್ಪ ವರದಿ, ಡಿ. ೨೭: ನವೆಂಬರ್ ತಿಂಗಳಿನಲ್ಲಿ ಹುಲಿ ದಾಳಿಗೆ ಹಸು ಕಳೆದುಕೊಂಡ ರೈತರಿಗೆ ಕೊಡಗು ವನ್ಯಜೀವಿ ಸಂಘದ ವತಿಯಿಂದ ತಲಾ ರೂ. ೫ ಸಾವಿರ ಸಹಾಯಧನ ನೀಡಲಾಯಿತು. ಭದ್ರಗೋಳ ನಿವಾಸಿ ಸಣ್ಣುವಂಡ ಕೆ. ಮುತ್ತಪ್ಪ ಹಾಗೂ ಗಾಂಡAಗಡ ಗಣಪತಿ ಅವರ ಮನೆಗೆ ತೆರಳಿ ಕೊಡಗು ವನ್ಯಜೀವಿ ಸಂಘದ ಉಪಾಧ್ಯಕ್ಷ ಕುಂಞAಗಡ ಎಸ್. ಬೋಸ್ ಮಾದಪ್ಪ ಚೆಕ್ ಹಸ್ತಾಂತರ ಮಾಡಿದರು.