ಅಮ್ಮತ್ತಿ: ಕಾರ್ಮಾಡು ಗ್ರಾಮ ಪಂಚಾಯ್ತಿ ೨ನೇ ವಾರ್ಡ್ನಲ್ಲಿ ಅಭ್ಯರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಮತದಾರರನ್ನು ವಾಹನದಲ್ಲಿ ಕರೆದುಕೊಂಡು ಹೋಗಿ ಮತಗಟ್ಟೆಯ ನಿಷೇಧಿತ ಪ್ರದೇಶದಲ್ಲಿ ಅಭ್ಯರ್ಥಿಗಳು ಮತಸೆಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪ ವ್ಯಕ್ತವಾದ ಹಿನ್ನೆಲೆ ಮಾತಿನ ಚಕಮಕಿ ಉಂಟಾಯಿತು ಎನ್ನಲಾಗಿದೆ.
ಬೆಳಗ್ಗಿನಿಂದ ಕಾರ್ಮಾಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶೇ. ೭೧.೫೯ ಮತದಾನ ನಡೆಯಿತು. ಅಮ್ಮತ್ತಿ ವ್ಯಾಪ್ತಿಯಲ್ಲಿ ಶೇ. ೫೩.೩, ಹೊಸೂರು ಭಾಗದಲ್ಲಿ ಶೇ. ೫೭.೮ ಮತದಾನ ನಡೆಯಿತು. ಚುನಾವಣಾ ವೀಕ್ಷಕರಾದ ದೇವರಾಜು, ಪ್ರಮೋದ್ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.