ವೀರಾಜಪೇಟೆ, ಡಿ. ೨೭: ಐದು ಲಕ್ಷ ರೂಪಾಯಿ ಬೆಲೆಬಾಳುವ ಎರಡು ಚಿರತೆ ಚರ್ಮಗಳನ್ನು ಮಾರಾಟ ಮಾಡುವ ಸಂದರ್ಭ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಬಂಧಿಸಿದ್ದ ಆರೋಪಿಗಳಾದ ಸುಂಟಿಕೊಪ್ಪದ ಮುಹಮ್ಮದ್ ಕಬೀರ್, ಎಡಪಾಲದ ಎಂ.ಕೆ. ಹುಸೈನ್ ಎಂಬುವರಿಗೆ ವೀರಾಜಪೇಟೆ ಜಿಲ್ಲಾ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿದೆ.
ತಾ. ೬ ರಂದು ಬಂಧನಕ್ಕೆ ಒಳಗಾದ ಆರೋಪಿಗಳ ಜಾಮೀನು ಅರ್ಜಿ ವೀರಾಜಪೇಟೆ ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ವಜಾಗೊಂಡಿತ್ತು. ನಂತರ ವೀರಾಜಪೇಟೆ ಜಿಲ್ಲಾ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಆರೋಪಿಗಳಿಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಷÀರತ್ತುಬದ್ದ ಜಾಮೀನು ನೀಡಿ ಆದೇಶ ಹೊರಡಿಸಿದೆ. ಆರೋಪಿಗಳ ಪರವಾಗಿ ವೀರಾಜಪೇಟೆ ಹಿರಿಯ ವಕೀಲ ಡಿ.ಸಿ. ಧ್ರುವಕುಮಾರ್ ವಕಾಲತ್ತು ವಹಿಸಿದ್ದರು.