ಮಡಿಕೇರಿ, ಡಿ. ೨೬: ಜಿಲ್ಲೆಯಲ್ಲಿ ತಾ. ೨೬ ರಂದು ಹೊಸದಾಗಿ ೫ ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ ೧,೧೦,೫೦೬ ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, ೫,೬೯೯ ಮಂದಿಗೆ ಸೋಂಕು ತಗುಲಿದೆ. ಈ ಪೈಕಿ ೫,೫೬೭ ಮಂದಿ ಗುಣಮುಖರಾಗಿದ್ದಾರೆ. ಒಟ್ಟು ೭೫ ಮಂದಿ ಸಾವನ್ನಪ್ಪಿದ್ದು, ೫೭ ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ ೧೮ ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, ೩೯ ಮಂದಿ ಹೋಮ್ ಐಸೋಲೇಷನ್‌ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ ೭೨ ನಿಯಂತ್ರಿತ ವಲಯಗಳಿವೆ.