ಮೂರ್ನಾಡು, ಡಿ. ೨೬: ಮೂರ್ನಾಡು-ಕೊಂಡAಗೇರಿ ತಿರುವಿನ ಸಮೀಪ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಇಂದು ಬೆಳಿಗ್ಗೆ ವಿದ್ಯುತ್ ಕಂಬವೊAದಕ್ಕೆ ಅಪ್ಪಳಿಸಿದ ಪರಿಣಾಮ ಕಂಬವು ಮುರಿದು ಬಿದ್ದಿದೆ. ಲಾರಿ ಚಾಲಕನಿಗೆ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾನೆ. ಚೆಸ್ಕಾಂ ಇಲಾಖೆ ಸಿಬ್ಬಂದಿ ತಕ್ಷಣವೇ ಕಂಬ ತೆರವುಗೊಳಿಸಿ ನೂತನ ಕಂಬ ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದರು. ಚಿತ್ರ: ಕಿಗ್ಗಾಲು ಗಿರೀಶ್