ಮಡಿಕೇರಿ, ಡಿ. ೨೬: ತೇಲಪಂಡ ಕುಟುಂಬಸ್ಥರು ಬೇಂಗ್‌ನಾಡ್‌ನ (ಬೇಂಗಾಯಿರ ನಾಡ್) ನಾಡ್ ತಕ್ಕರು ಹಾಗೂ ಬೊಳ್ಳರಿಮಾನಿಯ ಊರು ತಕ್ಕರಾಗಿದ್ದಾರೆ ಎಂದು ತೇಲಪಂಡ ಕುಟುಂಬದ ಪ್ರಮೋದ್ ಸೋಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.

ತಾ. ೨೬ ರ ಪತ್ರಿಕೆಯಲ್ಲಿ ಪ್ರಕಟವಾದ ತಕ್ಕಮುಖ್ಯಸ್ಥರ ಸಮಾವೇಶ ಸುದ್ದಿಯಲ್ಲಿ ಪಟ್ಟಮಾಡ ಕುಟುಂಬ ಬೇಂಗ್‌ನಾಡ್ ತಕ್ಕರು ಎಂದು ತೇಲಪಂಡ ಕುಟುಂಬ ಬೊಳ್ಳರಿಮಾನಿ ಎಂದು ಪ್ರಕಟವಾಗಿದೆ. ಆದರೆ ಇಲ್ಲಿ ತೇಲಪಂಡ ಕುಟುಂಬ ಬೇಂಗ್‌ನಾಡ್‌ನ ಒಂದನೇ ತಕ್ಕರಾಗಿಯೂ ಪಟ್ಟಮಾಡ ಹಾಗೂ ಕಲ್‌ಮಾಡಂಡ ಜೋಡ್ ತಕ್ಕರಾಗಿಯೂ ಕಾರ್ಯ ನಿರ್ವಹಿಸಿಕೊಂಡು ಬಂದಿರುವುದು ಪರಂಪರೆಯಾಗಿದೆ. ಇದರೊಂದಿಗೆ ತೇಲಪಂಡ ಬೊಳ್ಳರಿಮಾನಿಯ ಊರು ತಕ್ಕರಾಗಿಯೂ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.