ಸುಂಟಿಕೊಪ್ಪ, ಡಿ. ೨೬: ಪಟ್ಟಣದ ಸಹಕಾರ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಚಿನ್ನ ಕಳ್ಳತನ, ರೂ. ೧೩ ಲಕ್ಷದಷ್ಟು ಹಣ ದುರುಪಯೋಗ ಆರೋಪ ಸಂಬAಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು.

ಶ್ರೀ ಮಂಜುನಾಥಯ್ಯ ಸಹಕಾರ ಭವನದಲ್ಲಿ ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ಬಗ್ಗೆ ಚರ್ಚೆಯಾಯಿತು. ಕಳೆದ ವರ್ಷ ಗ್ರಾಹಕರು ಸಂಘದಲ್ಲಿ ಅಡವಿಟ್ಟ ಚಿನ್ನ ಕಳ್ಳತನವಾಗಿದೆ. ಸಿಇಓ ಸೇರಿ ಇಬ್ಬರು ಗುಮಾಸ್ತರಿಂದ ಚಿನ್ನಾಭರಣದ ಮೌಲ್ಯವನ್ನು ಕಟ್ಟಿಸಿಕೊಳ್ಳಲಾಗಿದೆ. ಆದರೆ, ಕಳ್ಳತನ ಯಾರೂ ಮಾಡಿದ್ದಾರೆಂದು ಇಂದಿಗೂ ತಿಳಿದು ಬಂದಿಲ್ಲ. ಇದರಿಂದ ಅಮಾಯಕರಿಗೆ ಶಿಕ್ಷೆಯಾಗಿದೆ. ಚಿನ್ನ ಹೇಗೆ ಮಾಯವಾಯಿತು, ಸಿಸಿ ಕ್ಯಾಮೆರಾ ಇದ್ದರು ಕಳ್ಳತನ ಮಾಡಿದವರನ್ನು ಇನ್ನು ಪತ್ತೆ ಹಚ್ಚದಿರುವುದರ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಆಡಿಟ್ ವರದಿಯಲ್ಲಿ ರೂ. ೧೩,೭೨,೫೧೪ ನಷ್ಟು ಸಂಘದ ಹಣ ದುರುಪಯೋಗವಾಗಿದೆ ಎಂದು ವರದಿ ಬಂದಿದೆ. ಈ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಬಿಬಾಣೆಯ ಜವಾಹರ್, ಲವ, ಶಾಂತಪ್ಪ, ಕೆ.ಎಂ. ಲಕ್ಷö್ಮಣ್, ಕರುಣ, ಕೆ.ಡಿ. ರಾಮಯ್ಯ, ಬಾಲಕೃಷ್ಣ ರೈ ಪ್ರಶ್ನಿಸಿದರು. ಆಡಳಿತ ಮಂಡಳಿ ಸದಸ್ಯರ ಹಿತ ಕಾಪಾಡುತ್ತಿದ್ದು, ಸಂಘದ ಅಭಿವೃದ್ಧಿಗೆ ಶ್ರಮ ವಹಿಸಿ ಕೆಲಸ ಮಾಡುತ್ತಿದೆ. ಸಹಕಾರ ಸಂಘದ ಅನ್ವಯ ಸಹಕಾರ ಇಲಾಖೆ ಉಪನಿಬಂಧಕರಿಗೆ ದೂರು ನೀಡಿದ್ದು, ಅವರ ಆದೇಶ ಅನುಸಾರ ಹಣ ದುರುಪಯೋಗ ಪಡಿಸಿದ ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸ ಲಾಗುವುದು ಎಂದು ನಿರ್ದೇಶಕ ಎಂ.ಎನ್. ಕೊಮರಪ್ಪ ತಿಳಿಸಿದರು. ಅಧ್ಯಕ್ಷ ದಾಸಂಡ ರಮೇಶ್ ಮಾತನಾಡಿ, ಸಂಘ ರೂ.೪೧ ಲಕ್ಷ ಲಾಭದಲ್ಲಿದೆ. ಇನ್ನಷ್ಟು ಅಭಿವೃದ್ಧಿ ಪಡಿಸಲು ಸಂಘದ ಸದಸ್ಯರುಗಳ ಸಲಹೆ, ಸಹಕಾರ ನೀಡಬೇಕು ಎಂದು ಹೇಳಿದರು. ದೀರ್ಘ ಕಾಲದ ರಜೆಯಲ್ಲಿರುವ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿರುದ್ಧ ಕ್ರಮಕೈಗೊಳ್ಳಲು ಸದಸ್ಯರುಗಳು ಆಗ್ರಹಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಜಿ.ಜಿ. ಕೋಮಲ, ನಿರ್ದೇಶಕರುಗಳಾದ