ಮಡಿಕೇರಿ, ಡಿ.೨೬; ಆಟೋರಿಕ್ಷಾದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಅಬಕಾರಿ ಇಲಾಖಾಧಿಕಾರಿಗಳು ಓರ್ವನನ್ನು ಬಂಧಿಸಿ ಮದ್ಯ ಸಹಿತ ಆಟೋರಿಕ್ಷಾವನ್ನು ವಶಪಡಿಸಿ ಕೊಂಡಿದ್ದಾರೆ.

ತಾ.೨೫ರಂದು ಗೋಣಿಕೊಪ್ಪ ಪಟ್ಟಣದಲ್ಲಿ ಆಟೋರಿಕ್ಷಾದಲ್ಲಿ (ಕೆಎ೧೨-ಬಿ-೭೯೩೮) ೧೭.೨೮೦ಲೀಟರ್ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ದಾಳಿ ನಡೆಸಿದ ಅಬಕಾರಿ ಇಲಾಖಾ ಅಧಿಕಾರಿಗಳು ವಾಹನ ಹಾಗೂ ಮದ್ಯವನ್ನು ವಶಪಡಿಸಿ ಕೊಂಡಿದ್ದಾರೆ. ಈ ಸಂಬAಧ ಎಂ.ಪಿ.ಮಹೇAದ್ರ ಎಂಬಾತನನ್ನು ಬಂಧಿಸಿ ಮೊಕದ್ದಮೆ ದಾಖಲಿಸ ಲಾಗಿದೆ. ಅಬಕಾರಿ ಉಪ ಆಯುಕ್ತರಾದ ಪಿ.ಬಿಂದುಶ್ರೀ ಅವರ ಮಾರ್ಗದರ್ಶನ ದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಲಕ್ಷಿö್ಮÃಶ, ಉಪ ಅಧೀಕ್ಷಕ ಅಶೋಕ್ ಪೂಜಾರಿ, ಮುಖ್ಯ ರಕ್ಷಕ ಕೆ.ಎಸ್.ಉತ್ತಪ್ಪ, ರಕ್ಷಕರಾದÀ ಕೆ.ಎಸ್.ರಾಜ, ಶಿವಣ್ಣ, ಚಾಲಕ ಪೂಣಚ್ಚ ಪಾಲ್ಗೊಂಡಿದ್ದರು.ಮತ್ತೊAದು ಪ್ರಕರಣದಲ್ಲಿ ಅಬಕಾರಿ ಉಪ ಆಯುಕ್ತರಾದ ಪಿ. ಬಿಂದುಶ್ರೀ ಮಾರ್ಗದರ್ಶನ ಮತ್ತು ಪ್ರಭಾರ ಅಬಕಾರ ಉಪ ಅಧೀಕ್ಷಕಿ ಭಾಗ್ಯ ಅವರ ನೇತೃತ್ವದಲ್ಲಿ ಶ್ರೀಮಂಗಲ- ಕುಟ್ಟ- ಟಿ. ಶೆಟ್ಟಿಗೇರಿ ಮುಖ್ಯ ರಸ್ತೆಯಲ್ಲಿ ಆಟೋ ರಿಕ್ಷಾದಲ್ಲಿ (ಕೆಎ -೧೨, ಎ-೮೪೯೭)ದಲ್ಲಿ ೮.೬೪೦ ಲೀಟರ್ ಮದ್ಯ ಹಾಗೂ ೭.೯೨೦ ಲೀಟರ್ ಬಿಯರನ್ನು ಅಕ್ರಮವಾಗಿ ಕಾನೂನು ಬಾಹಿರವಾಗಿ ಸಾಗಾಟ ಮಾಡುತ್ತಿದ್ದ ಸಂಬAಧ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ. ಮದ್ಯ ಮತ್ತು ಬಿಯರ್ ಹಾಗೂ ಆಟೋ ರಿಕ್ಷಾವನ್ನು ವಶಪಡಿಸಿಕೊಂಡು ಆರೋಪಿ ಹೆಚ್.ಬಿ. ಮಣಿಕಂಠ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಟಿ.ಎಸ್. ಮೋಹನ್ ಕುಮಾರ್ ಅಬಕಾರಿ ಉಪನಿರೀಕ್ಷಕ, ಸಿಬ್ಬಂದಿಗಳಾದ ಸಿ. ಗೋವಿಂದ ನಾಯ್ಕ, ಹೆಚ್.ಸಿ. ಚಂದ್ರ, ಸುನಿಲ್ ಕುಮಾರ್, ನಂದ ಗೋಕುಲ ಹಾಗೂ ಚಾಲಕ ರಾಜೇಂದ್ರ ಪಾಲ್ಗೊಂಡಿದ್ದರು.