ಪೆರಾಜೆ, ಡಿ. ೨೫: ಪೆರಾಜೆ-ಕಲ್ಲುಚರ್ಪೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೊಳಂಗಾಯ ಹೊನ್ನಪ್ಪ ಅಧ್ಯಕ್ಷತೆಯಲ್ಲಿ ಪೆರಾಜೆ ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನಡೆಯಿತು.

ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಇಂದಿರಾ ಕೆ.ಎಸ್. ಮತ್ತು ೨೦೧೯-೨೦ನೇ ಸಾಲಿನ ವರದಿಯನ್ನು ಪಿ.ಹೆಚ್. ಚಂದ್ರಶೇಖರ್ ಓದಿದರು.

ಕಳೆದ ಸಾಲಿನಲ್ಲಿ ಅತಿ ಹೆಚ್ಚು ಹಾಲು ಉತ್ಪಾದಕರಾದ ವಿಷ್ಣು ಪ್ರಸಾದ್, ಯಶೋಧ ಕೆ.ವೈ., ಕೆ.ಆರ್ ದಾಮೋದರ ಅವರಿಗೆ ಬಹುಮಾನ ವಿತರಿಸಲಾಯಿತು.

ಸಂಘದ ನಿರ್ದೇಶಕರಾದ ರಾಮಕೃಷ್ಣ ಪೆರುಮುಂಡ, ಕೇಶವ ಕೊಳಂಗಾಯ, ಕುಂಬಳಚೇರಿ ವಿ. ರಾಜೇಶ್, ಬಾಬು ಸೆಬಾಸ್ಟಿನ್, ಚಂದ್ರಾವತಿ ಕುಂಬಳಚೇರಿ, ಸುಷ್ಮಾ ಡಿ.ಡಿ., ಸಿಬ್ಬಂದಿಗಳಾದ ವಿಜಯ ಮತ್ತು ಕಾರ್ಯದರ್ಶಿ ಕೃಪಾಸೂರ್ಯ ಕೊಳಂಗಾಯ ಸೇರಿದಂತೆ ಸಂಘದ ಸದಸ್ಯರುಗಳು ಇದ್ದರು.

ಪ್ರಣಮ್ಯ ಪ್ರಾರ್ಥಿಸಿ, ಸಂಘದ ಉಪಾಧ್ಯಕ್ಷ ಕುಂದಲ್ಪಾಡಿ ಉಪೇಂದ್ರ ಸ್ವಾಗತಿಸಿ, ನಿರ್ದೇಶಕ ವಿಷ್ಣುಪ್ರಸಾದ್ ವಂದಿಸಿದರು.