ಮಡಿಕೇರಿ, ಡಿ. 24: ಮಡಿಕೇರಿಯಲ್ಲಿ ಶಾಖೆಯನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ತಾ. 16 ರಂದು ನಡೆಯಿತು. ಸಂಘದ ಸದಸ್ಯರಿಗೆ ಶೇ. 15 ಡಿವಿಡೆಂಡ್ ನೀಡಲಾಗುವುದೆಂದು ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಮ ಅವರು ಹೇಳಿದರು.

ಮಹಾಸಭೆ ಬಳಿಕ ಗೌಡ ಸಮುದಾಯ ಭವನದಲ್ಲೇ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, 2020 ಮಾರ್ಚ್ ಅಂತ್ಯಕ್ಕೆ 11,689 ಸದಸ್ಯರು ಹಾಗೂ ರೂ. 2,90,28,600 ಪಾಲು ಬಂಡವಾಳ ವಿದ್ದು ರೂ. 80.98 ಕೋಟಿ ಠೇವಣಿ ಸಂಗ್ರಹವಾಗಿದೆ. ಸದಸ್ಯರುಗಳಿಗೆ ವಿವಿಧ ರೂಪದಲ್ಲಿ ರೂ. 69.94 ಕೋಟಿ ಸಾಲ ವಿತರಿಸಲಾಗಿದೆ. ವಿವಿಧ ಬ್ಯಾಂಕುಗಳಲ್ಲಿ ರೂ. 11.46 ಕೋಟಿ ಧನ ವಿನಿಯೋಗ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ರೂ. 375 ಕೋಟಿ ವ್ಯವಹಾರ ಮಾಡಿ ರೂ. 1 ಕೋಟಿ 8 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ವಿವರಿಸಿದರು.

25 ಶಾಖೆಯ ಗುರಿ

ಸಂಘವು ಪ್ರಸ್ತುತ 13 ಶಾಖೆಗಳನ್ನು ಹೊಂದಿದ್ದು, ಮುಂದಿನ ಜ. 24 ರಂದು ಉಪ್ಪಿನಂಗಡಿಯಲ್ಲಿ 14ನೇ ಶಾಖೆಯನ್ನು ಆರಂಭಿಸಲಾಗುವುದು. 2022ರಲ್ಲಿ ಸೊಸೈಟಿಯ ಬೆಳ್ಳಿಹಬ್ಬ ನಡೆಯಲಿದ್ದು, ಆ ವೇಳೆಗೆ 25 ಶಾಖೆ ತೆರೆಯಲ್ಪಡಬೇಕೆಂಬುದು ನಮ್ಮ ಗುರಿ ಎಂದು ಪಿ.ಸಿ. ಜಯರಾಮ ಹೇಳಿದರು. ಮುಂದಿನ ಆರ್ಥಿಕ ವರ್ಷ ದಲ್ಲಿ ರೂ. 100 ಕೋಟಿ ಠೇವಣಿ ಸಂಗ್ರಹಿಸಿ, ರೂ. 85 ಕೋಟಿ ಸಾಲ ವಿತರಿಸಿ, ರೂ. 400 ಕೋಟಿಗಳಷ್ಟು ವ್ಯವಹಾರ ನಡೆಸಲು ಯೋಜನೆ ರೂಪಿಸಿರುವುದಾಗಿ ಅವರು ಹೇಳಿದರು.

ಸಂಘವು ಆಡಿಟ್ ವರ್ಗೀಕರಣ ದಲ್ಲಿ ನಿರಂತರವಾಗಿ ‘ಎ’ ತರಗತಿ ಯನ್ನು ಕಾಯ್ದುಕೊಂಡು ಬರುತ್ತಿದ್ದು, ಸತತ ಮೂರು ಬಾರಿ ರಾಜ್ಯದ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ಗಳಿಸಿದೆ ಎಂದ ಪಿ.ಸಿ. ಜಯರಾಮ ಅವರು ಕಳೆದ ವರ್ಷ ಬೆಳ್ತಂಗಡಿಯಲ್ಲಿ ಹೊಂದಿದ್ದು, ಮುಂದಿನ ಜ. 24 ರಂದು ಉಪ್ಪಿನಂಗಡಿಯಲ್ಲಿ 14ನೇ ಶಾಖೆಯನ್ನು ಆರಂಭಿಸಲಾಗುವುದು. 2022ರಲ್ಲಿ ಸೊಸೈಟಿಯ ಬೆಳ್ಳಿಹಬ್ಬ ನಡೆಯಲಿದ್ದು, ಆ ವೇಳೆಗೆ 25 ಶಾಖೆ ತೆರೆಯಲ್ಪಡಬೇಕೆಂಬುದು ನಮ್ಮ ಗುರಿ ಎಂದು ಪಿ.ಸಿ. ಜಯರಾಮ ಹೇಳಿದರು. ಮುಂದಿನ ಆರ್ಥಿಕ ವರ್ಷ ದಲ್ಲಿ ರೂ. 100 ಕೋಟಿ ಠೇವಣಿ ಸಂಗ್ರಹಿಸಿ, ರೂ. 85 ಕೋಟಿ ಸಾಲ ವಿತರಿಸಿ, ರೂ. 400 ಕೋಟಿಗಳಷ್ಟು ವ್ಯವಹಾರ ನಡೆಸಲು ಯೋಜನೆ ರೂಪಿಸಿರುವುದಾಗಿ ಅವರು ಹೇಳಿದರು.

ಸಂಘವು ಆಡಿಟ್ ವರ್ಗೀಕರಣ ದಲ್ಲಿ ನಿರಂತರವಾಗಿ ‘ಎ’ ತರಗತಿ ಯನ್ನು ಕಾಯ್ದುಕೊಂಡು ಬರುತ್ತಿದ್ದು, ಸತತ ಮೂರು ಬಾರಿ ರಾಜ್ಯದ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ಗಳಿಸಿದೆ ಎಂದ ಪಿ.ಸಿ. ಜಯರಾಮ ಅವರು ಕಳೆದ ವರ್ಷ ಬೆಳ್ತಂಗಡಿಯಲ್ಲಿ ಬಗ್ಗೆ ರತ್ನಾಕರ ಗೌಡರು, ಕೋಡಿ ಚಂದ್ರಶೇಕರ್, ಎನ್.ಎ. ಜ್ಞಾನೇಶ್ ಮತ್ತಿತರ ಹಲವರು ಚರ್ಚೆ ನಡೆಸಿ ಉತ್ತರ ಪಡೆದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ್ 23ನೇ ವಾರ್ಷಿಕ ವರದಿಯನ್ನು ಮಂಡಿಸಿದರು. ಸದಸ್ಯರ ಪ್ರಶ್ನೆಗಳಿಗೆ ಪಿ.ಸಿ. ಜಯರಾಮ ಅವರು ಉತ್ತರಿಸಿ ವರದಿಗೆ ಸದಸ್ಯರ ಅಂಗೀಕಾರ ಪಡೆದು ಕೊಂಡರು. ಜಮಾ ಖರ್ಚಿನ ವಿವರ ಕೂಡ ಸರ್ವಾನುಮತದಿಂದ ಅನುಮೋದಿ ಸಲ್ಪಟ್ಟಿತು. ಗೃಹ ನಿರ್ಮಾಣ ಸಾಲಕ್ಕೆ ಬಡ್ಡಿ ದರ ಕಡಿಮೆ ಮಾಡುವಂತೆ ಬೆಳಾಲು ತಿಮ್ಮಪ್ಪ ಗೌಡ ಸಲಹೆ ನೀಡಿದಾಗ, ಖರ್ಚಿನ ದೃಷ್ಟಿಯಿಂದ ಈ ಸಲಹೆ ಅನುಷ್ಠಾನ ಕಷ್ಟಸಾಧ್ಯ ಎಂದು ಅಧ್ಯಕ್ಷರು ಹೇಳಿದರು. ಈಗಲೇ ಶಾಖೆಗಳು ಕಾರ್ಯನಿರ್ವಹಿಸುವಲ್ಲಿ ನಿವೇಶನ ಖರೀದಿಸುವಂತೆ ತಿಮ್ಮಪ್ಪ ಗೌಡರು ಸಲಹೆ ನೀಡಿದುದನ್ನು ಒಪ್ಪಿಕೊಳ್ಳ ಲಾಯಿತು. 2019-20ನೇ ಸಾಲಿನ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿ ಪಡೆದ ವೆಂಕಟರಮಣ ಸೊಸೈಟಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಚಂದ್ರ ಕೋಲ್ಚಾರ್ ಅವರನ್ನು ಪತ್ನಿ ಜಯಶ್ರೀ ಅವರ ಸಹಿತ ಸನ್ಮಾನಿಸಲಾಯಿತು.

ಪ್ರತಿಭಾನ್ವಿತ ಬಡ ವಿದ್ಯಾರ್ಥಿ ಗಳಾದ ಧನ್ಯಶ್ರೀ ಕೆ., ದೇವಚಳ್ಳ, ಕಾರ್ತಿಕ್ ಎನ್.ಹೆಚ್. ಸೋಣಂಗೇರಿ, ಭೂಮಿಕಾ ವಿ.ಕೆ. ಕಾಯರ್ತೋಡಿ ಇವರಿಗೆ ಪೆÇ್ರೀತ್ಸಾಹ ಧನ ವಿತರಿಸಲಾಯಿತು. ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ, ಉಪಾಧ್ಯಕ್ಷ ಮೋಹನ್‍ರಾಂ ಸುಳ್ಯ, ನಿರ್ದೇಶಕರು ಗಳಾದ ಜಾಕೆ ಮಾಧವ ಗೌಡ, ನಿತ್ಯಾನಂದ ಮುಂಡೋಡಿ, ಎ.ವಿ. ತೀರ್ಥರಾಮ, ಚಂದ್ರಾ ಕೋಲ್ಚಾರ್, ಕೆ.ಸಿ. ನಾರಾಯಣ ಗೌಡ, ಕೆ.ಸಿ. ಸದಾನಂದ, ಪಿ.ಎಸ್. ಗಂಗಾಧರ್, ದಿನೇಶ್ ಮಡಪ್ಪಾಡಿ, ದಾಮೋದರ ಎನ್.ಎಸ್. ಹೇಮಚಂದ್ರ ಐ.ಕೆ., ನವೀನ್‍ಕುಮಾರ್ ಜಾಕೆ, ಜಯ ಲಲಿತಾ ಕೆ.ಎಸ್., ನಳಿನಿ ಸೂರಯ್ಯ, ಲತಾ ಎಸ್. ಮಾವಜಿ, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಮೇರ್ಕಜೆ ಹಾಗೂ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.