ಶ್ರೀಮಂಗಲ/ ಗೋಣಿಕೊಪ್ಪ, ಡಿ. 22: ಮಹಿಳೆಯೋರ್ವಳೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ವ್ಯಕ್ತಿಯೋರ್ವ ಇದಕ್ಕೆ ಅಡ್ಡಿಯಾಗುತ್ತಿದ್ದ ಎರಡು ವರ್ಷ ಪ್ರಾಯದ ಮುಗ್ಧ ಮಗುವನ್ನು ಕೊಂದಿರುವ ಪಾಶವೀ ಕೃತ್ಯವೊಂದು ವರದಿಯಾಗಿದೆ. ಶ್ರೀಮಂಗಲ ಠಾಣಾ ವ್ಯಾಪ್ತಿಯ ವೆಸ್ಟ್ನೆಮ್ಮಲೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಪಣಿ ಎರವರ ರವಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಈತ ತಾನು ಸಂಬಂಧ ಇರಿಸಿಕೊಂಡಿದ್ದ ಮಹಿಳೆಗೆ ಇದ್ದ ಎರಡು ವರ್ಷದ ಗಂಡು ಮಗುವಿನ ಎದೆಭಾಗಕ್ಕೆ ಗುದ್ದಿದ ಪರಿಣಾಮ ಮಗು ಸಾವಿಗೀಡಾಗಿದೆ. ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರೂ ಪ್ರಾಯೋಜನ ವಾಗಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಮೃತÀಪಟ್ಟಿರುವ ಮಗು ಬೂದಿತಿಟ್ಟು ಮೂಲದ ಜೇನು ಕುರುಬರ ಸುಬ್ರಮಣಿ ಮತ್ತು ಗೀತಾ ದಂಪತಿಯ ಮಗುವಾಗಿದೆ. ಘಟನೆಯ ವಿವರ : 7 ವರ್ಷದ ಹಿಂದೆ ಬೂದಿತಿಟ್ಟುವಿನ ಜೇನುಕುರುಬರ ಸುಬ್ರಮಣಿ ಹಾಗೂ ಗೀತಾ ಮದುವೆಯಾಗಿದ್ದರು. 6 ತಿಂಗಳ ಹಿಂದೆ ಈ ದಂಪತಿಗಳು ವೆಸ್ಟ್ ನೆಮ್ಮಲೆ ಗ್ರಾಮದ ಸಿ. ಕಾಳಯ್ಯ ಅವರ ಲೈನ್ ಮನೆಯಲ್ಲಿ ವಾಸವಾಗಿದ್ದರು. 3 ತಿಂಗಳ ಹಿಂದೆ ದಂಪತಿಗಳ ಮಧ್ಯೆ ಜಗಳವಾಗಿ ಹಿರಿಯ ಪುತ್ರಿಯೊಂದಿಗೆ ಸುಬ್ರಮಣಿ ಗ್ರಾಮ ಬಿಟ್ಟು ಹೋಗಿದ್ದರು. 2 ವರ್ಷದ ಗಂಡು ಮಗುವಿನೊಂದಿಗೆ ಗೀತಾ ವೆಸ್ಟ್ ನೆಮ್ಮಲೆಯಲ್ಲಿಯೇ ವಾಸವಾಗಿದ್ದಳು. ಇದರ ನಡುವೆ ಗೀತಾಳಿಗೆ ಕಾಕೂರು ಗ್ರಾಮದ ಪಣಿ ಎರವರ ರವಿ ಎಂಬಾತನ ಪರಿಚಯವಾಗಿ ರವಿಯೊಂದಿಗೆ ಕಾಕೂರು ಕಾಲೋನಿಯಲ್ಲಿ ವಾಸವಾಗಿದ್ದಳು. ಸೋಮವಾರ ರಾತ್ರಿ ಆರೋಪಿ ರವಿ,
(ಮೊದಲ ಪುಟದಿಂದ) ಗೀತಾಳ ಮೊದಲ ಪತಿಯ ಮಗುವನ್ನು ಸಾಕಲು ಸಾಧ್ಯವಿಲ್ಲ ಎಂದು ಜಗಳವಾಡಿ ಮಗುವಿನ ಎದೆಗೆ ಬಲವಾಗಿ ಗುದ್ದಿದಲ್ಲದೇ, ಗೀತಾಳಿಗೂ ಕಾಫಿ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ.
ಗಾಯಗೊಂಡಿದ್ದ ಮಗುವನ್ನು ರಾತ್ರಿಯೇ ಕುಟ್ಟ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಮಂಗಳವಾರ ಬೆಳಿಗ್ಗೆ ಸಾವಿಗೀಡಾಗಿದೆ. ಆರೋಪಿ ಪಣಿ ಎರವರ ರವಿಯನ್ನು ಶ್ರೀಮಂಗಲ ಪೊಲೀಸರು ವಶಕ್ಕೆ ಪಡೆದಿದ್ದು, ಐಪಿಸಿ ಸೆಕ್ಷನ್ 324 ಮತ್ತು 302ರಂತೆ ಮೊಕದ್ದಮೆಯೊಂದಿಗೆ ಪ್ರಕರಣ ದಾಖಲಿಸಿದ್ದಾರೆ. ಕೃತ್ಯದ ಬಗ್ಗೆ ಮಾಹಿತಿ ದೊರೆತ ಬಳಿಕ ಕುಟ್ಟ ವೃತ್ತ ನಿರೀಕ್ಷಕರಾದ ಪರಶಿವಮೂರ್ತಿ, ಎಸ್.ಐ.ರವಿಶಂಕರ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ವೇಳೆ ಆರೋಪಿ ತಲೆ ಮರೆಸಿಕೊಂಡಿದ್ದ. ರವಿ ಅಡಗಿರುವ ಜಾಡು ಕಂಡು ಹಿಡಿದ ಪೆÇಲೀಸರು ಆರೋಪಿಯನ್ನು ಮಧ್ಯಾಹ್ನದ ವೇಳೆ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಈ ಸಂದರ್ಭ ರವಿಯು ನಡೆದ ಘಟನೆಯನ್ನು ಪೆÇಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಎಸ್.ಐ.ರವಿಶಂಕರ್, ಎಎಸ್ಐ ಸಾಬು, ದಿನೇಶ್, ಸಿಬ್ಬಂದಿಗಳಾದ ಕುಮಾರ್, ಸುಕುಮಾರ್, ಗಣೇಶ್ ಮುಂತಾದವರು ಹಾಜರಿದ್ದರು.