ಕುಶಾಲನಗರ, ಡಿ. 22: ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ ಘಟನೆ ನಡೆದಿದೆ. ಸೂಕ್ಷ್ಮ ಮತಗಟ್ಟೆಯಾಗಿ ರುವ ಹೆಬ್ಬಾಲೆಯಲ್ಲಿ ಮತ ಕೇಂದ್ರದ 100 ಮೀಟರ್ ಅಂತರ ಕಾಯ್ದು ಕೊಳ್ಳದೆ ಕೆಲವು ನಾಗರಿಕರು ಅಡ್ಡಾಡಿ ಮತದಾರರಿಗೆ ಕೈಸನ್ನೆ ಮಾಡುತ್ತಿದ್ದ ಹಿನ್ನೆಲೆ ಪೊಲೀಸರು ಹಲವು ಬಾರಿ ಎಚ್ಚರಿಕೆ ನೀಡಿ ಗುಂಪು ಚದುರಿಸಿ ದರೂ ಕೂಡ ಮತ್ತೆ ಮತ್ತೆ ಅಡ್ಡಾಡು ತ್ತಿದ್ದ ಕೆಲವರ ಮೇಲೆ ಪೊಲೀಸರು ಲಾಠಿ ಬೀಸಿ ಚದುರಿಸ ಬೇಕಾಯಿತು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಲಾಠಿ ಬೀಸಿ ಕಾರ್ಯಕರ್ತರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದರು. ಈ ಸಂದರ್ಭ ಹೆಬ್ಬಾಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ಹೆಚ್.ಎಸ್. ರಘು ಎಂಬವರಿಗೆ ಲಾಠಿ ಏಟು ಬಿದ್ದಿದೆ. ಕರ್ತವ್ಯದಲ್ಲಿದ್ದ ಪೊಲೀಸರನ್ನು ಮದ್ಯ ಸೇವಿಸಿ ಗೇಲಿ ಮಾಡುತ್ತಿದ್ದ ಗುಂಪೊಂದನ್ನು ಚದುರಿಸಲು ಈ ಲಾಠಿ ಬೀಸುವ ಕಾರ್ಯಾಚರಣೆ ನಡೆಯಿತು.

ಹೆಬ್ಬಾಲೆಯ 128 ಸಂಖ್ಯೆಯ ಮತ ಕೇಂದ್ರ, ಕೂಡಿಗೆ ಗ್ರಾ.ಪಂ.ಯ ಮದಲಾಪುರದ ಮತ ಕೇಂದ್ರ 111 ರಲ್ಲಿ ಹಾಗೂ ಹಾರಂಗಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಲು ಕಾಯುತ್ತಿದ್ದ ದೃಶ್ಯ ಕಂಡುಬಂತು.

ಬಹುತೇಕ ಮತಗಟ್ಟೆಯ ಹೊರಭಾಗದಲ್ಲಿ ಪುಟ್ಟ ಮಕ್ಕಳು ತಮ್ಮ ಪೋಷಕರ ಪರವಾಗಿ ಮತಯಾಚಿ ಸುತ್ತಿದ್ದ ದೃಶ್ಯ ಕಂಡುಬಂತು. ಕೂಡಿಗೆ, ಹಾರಂಗಿ ಮತ್ತಿತರ ಮತದಾನ ಕೇಂದ್ರಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕರಪತ್ರ ಹಿಡಿದು ಮತದಾರರೊಂದಿಗೆ ತಮ್ಮ ಪೋಷಕರಿಗೆ ಮತ ನೀಡಿ ಎಂದು ಮನವಿ ಮಾಡುತ್ತಿದ್ದ ದೃಶ್ಯ ಗೋಚರಿಸಿತು. ಕೊರೊನಾ ಆತಂಕದ ಹಿನ್ನೆಲೆ ಶಾಲೆಗಳು ಮುಚ್ಚಲ್ಪಟ್ಟಿರುವ ಕಾರಣ ಮಕ್ಕಳು ಬಹುತೇಕ ಮತ ಗಟ್ಟೆಗಳಲ್ಲಿ ಪ್ರಚಾರ ಸಾಮಗ್ರಿಗಳನ್ನು ಹಿಡಿದು ಮತ ನೀಡುವಂತೆ ಮನವಿ ಮಾಡುತ್ತಿದ್ದರು. ಈ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದ ಪುಟಾಣಿಗಳು, ತಮ್ಮ ಪೋಷಕರ ಗೆಲವು ಶೇ. 100 ರಷ್ಟು ಖಚಿತ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಮುಳ್ಳುಸೋಗೆಯಲ್ಲಿ ಅಭ್ಯರ್ಥಿ ಗಳ ಬೆಂಬಲಿತ ಕಾರ್ಯಕರ್ತರ ನ್ನು ಚದುರಿಸಲು ಪೆÇಲೀಸರು ಲಾಠಿ ರುಚಿ ತೋರಿಸಬೇಕಾಯಿತು.

-ಚಂದ್ರಮೋಹನ್