ಸಿದ್ದಾಪುರ, ಡಿ. ೨೩: ಹುಲಿ ದಾಳಿಗೆ ಕರುವೊಂದು ಮೃತಪಟ್ಟಿರುವ ಘಟನೆ ಮಾಲ್ದಾರೆ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಾಲ್ದಾರೆ ಗ್ರಾಮದ ಶ್ರೀನಿವಾಸ್ ಅವರ ಕಾಫಿ ತೋಟದಲ್ಲಿ ಕರುವೊಂದರ ಮೇಲೆ ದಾಳಿ ನಡೆದಿದೆ. ಬುಧವಾರದಂದು ಕಾರ್ಮಿಕರು ಕೆಲಸ ಮಾಡಲು ಕಾಫಿ ತೋಟದೊಳಗೆ ತೆರಳಿದ ಸಂದರ್ಭ ಕರುವಿನ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಗ್ರಾಮಸ್ಥರು ಸಂಬAಧಪಟ್ಟ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.