ಸುಂಟಿಕೊಪ್ಪ, ಡಿ. ೨೩: ಪನ್ಯ ಗ್ರಾಮದ ಬೆಳ್ಳ್ಳಾರಿಕಮ್ಮ ದೇವಾಲಯದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಷಷ್ಠಿ ಪ್ರಯುಕ್ತ ನಾಗದೇವರಿಗೆ ಬೆಳ್ಳಾರಿಕಮ್ಮ ದೇವರಿಗೆ ವಿಶೇಷ ಪೂಜೆ ನೆÀರವೇರಿಸಲಾಯಿತು.
ಪೂಜಾ ಕೈಂಕರ್ಯವನ್ನು ಅರ್ಚಕರಾದ ಗಣೇಶ್ ಉಡುಪ ನೆರವೇರಿಸಿದರು. ನಾಗದೇವರಿಗೆ ಹಾಲು ಅಭಿಷೇಕ ನಾಗಾಲಂಕಾರ, ಪೂಜಾ ಕೈಂಕರ್ಯಗಳÀÄ ನೆÀರವೇರಿದ ನಂತರ ೧೨ ಗಂಟೆಗೆ ಮಹಾ ಮಂಗಳಾರತಿ, ಬಳಿಕ ಅನ್ನದಾನ ನಡೆಯಿತು. ಈ ಸಂದರ್ಭ ಸಮಿತಿ ಅಧ್ಯಕ್ಷ ಪಿ.ಕೆ. ಅನಿಲ್, ಕಾರ್ಯದರ್ಶಿ ಮಾಗಿಲು ವಸಂತ ಸರ್ವ ಸದಸ್ಯರು ಹಾಜರಿದ್ದರು.