ಸುಂಟಿಕೊಪ್ಪ ಕೃಷಿ ಪತ್ತಿನ ಸಂಘಕ್ಕೆ ರೂ. ೪೧.೪೨ ಲಕ್ಷ ಲಾಭ
ಸುಂಟಿಕೊಪ್ಪ, ಡಿ. ೨೩: ಇಲ್ಲಿನ ೨೭೫೫ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸುಂಟಿಕೊಪ್ಪ ಇವರ ೨೦೧೯-೨೦ನೇ ಸಾಲಿನಲ್ಲಿ ರೂ. ೪೧.೪೨ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಆಡಳಿತ ಮಂಡಳಿ ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಘವು ಒಟ್ಟು ೮ ಮಾರಾಟ ಶಾಖೆ ಮತ್ತು ೩ ಶಾಖೆಗಳಲ್ಲಿ ಬ್ಯಾಂಕಿAಗ್ ವ್ಯವಸ್ಥೆಗಳನ್ನು ಕಲ್ಪಿಸಿದ್ದು ೨೦೧೯-೨೦ನೆ ಸಾಲಿನಲ್ಲಿ ರೂ. ೨೭.೭೯ ಲಕ್ಷ ವ್ಯಾಪಾರ ಲಾಭವನ್ನು ಗಳಿಸಿರುತ್ತದೆ. ಸಂಘದ ೧೯೨೭ ಸದಸ್ಯರ ವಾರ್ಷಿಕ ವಹಿವಾಟಿನಿಂದ ಸಂಘವು ಲಾಭದ ಹಾದಿಯಲ್ಲಿದೆ. ಪ್ರಸ್ತುತ ಸಾಲಿನಲ್ಲಿ ೭೮ ಹೊಸ ಸದಸ್ಯರುಗಳು ಸದಸ್ಯತ್ವವನ್ನು ಪಡೆದುಕೊಂಡಿದ್ದು ಒಟ್ಟು ಸದಸ್ಯರು ರೂ. ೧೪೭.೫೨ ಲಕ್ಷ ಪಾಲು ಹಣವನ್ನು ಹೊಂದಿದ್ದಾರೆ. ಪ್ರಸ್ತುತ ಸಾಲಿನಲ್ಲಿ ಒಟ್ಟು ರೂ. ೧೨೯೦.೫೨ ಲಕ್ಷ ಸಂಚಯ, ನಿರಕು ಠೇವಣಿದಾರರಿಂದ ಹಾಗೂ ಪಿಗ್ಮಿ ಠೇವಣಿಗಳನ್ನು ಸಂಗ್ರಹಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ೬೪೬ ಸದಸ್ಯರಿಗೆ ಕೆ.ಸಿ.ಸಿ. ಕೃಷಿ ಸಾಲವನ್ನು ಕೃಷಿಯೇತರ ಸಾಲ ಸೇರಿ ರೂ. ೨೦೬೧.೪೪ ಲಕ್ಷ ಒಟ್ಟು ಸಾಲ ವಿತರಿಸಲಾಗಿದೆ. ೨೦೧೯-೨೦ನೇ ಸಾಲಿನಲ್ಲಿ ಒಟ್ಟು ರೂ. ೧೧೦.೦೩ ಕೋಟಿ ವ್ಯವಹಾರ ನಡೆಸಲಾಗಿದೆ.
ಸಂಘದ ಸಾರ್ವಜನಿಕ ಕಲ್ಯಾಣ ನಿಧಿಯಿಂದ ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಗಳ ಅತೀ ಹೆಚ್ಚು ಅಂಕ ಪಡೆದÀ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಗಿದೆ. ಸಂಘದ ಸದಸ್ಯರಾಗಿ ಮರಣಪಟ್ಟ ಸದಸ್ಯರ ಕುಟುಂಬಕ್ಕೆ ರೂ. ೫ ಸಾವಿರ ಮರಣ ನಿಧಿಯನ್ನು ನೀಡಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.