ಮಡಿಕೇರಿ, ಡಿ. 22: ಕೂರ್ಗ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಮುಖ್ಯ ಗ್ರಂಥಾಲಯದಲ್ಲಿ Iಕಿಂಅ ವತಿಯಿಂದ ಏರ್ಪಡಿಸಲಾದ ಯುಜನತೆಯ ಚಾರಿತ್ರ್ಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸ್ಥಾಪಿಸಲಾದ “ವಿವೇಕ ಸಂಕಲ್ಪ” ಅಧ್ಯಯನ ವಿಭಾಗವನ್ನು ಪೊನ್ನಂಪೇಟೆಯ ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಬೋಧಾನಂದ ಸ್ವರೂಪಾನಂದ ಸ್ವಾಮೀಜಿಯವರ ಅವರು ಉದ್ಘಾಟಿಸಿದರು.

ನಂತರ ಶ್ರೀಗಳು ಮಾತನಾಡಿ, ಪ್ರಸ್ತುತ ಯುವಜನಾಂಗ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ವಿವೇಕಾನಂದರ ಚಿಂತನೆ ಹಾಗೂ ಆದರ್ಶಗಳನ್ನು ಸಾರುವ ಗ್ರಂಥಗಳ ಅಧ್ಯಯನವನ್ನು ಮೈಗೂಡಿಸಿ ಕೊಳ್ಳಬೇಕೆಂದು ಕರೆ ನೀಡಿದರು. ಇದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ವಿವೇಕಾನಂದರ ಕುರಿತು ಹಲವು ಉಪಯುಕ್ತ ಗ್ರಂಥಗಳನ್ನು ಕಾಲೆÉೀಜಿನ ಗ್ರಂಥಾಲಯಕ್ಕೆ ಕೊಡುಗೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಬಸವರಾಜ್ ಮಾತನಾಡಿ, ಅಧ್ಯಯನ ಕೇಂದ್ರವನ್ನು ಕಾಲೇಜಿನ ಗ್ರಂಥಾಲಯದಲ್ಲಿ ಸ್ಥಾಪಿಸಿರುವುದಕ್ಕೆ ಹರ್ಷವನ್ನು ವ್ಯಕ್ತಪಡಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಯುವಜನತೆಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಕಾಲೇಜಿನ ಆಡಳಿತ ಅಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ವರ್ಗದವರು ಹಾಜರಿದ್ದರು.

ಕಾರ್ಯಕ್ರಮವನ್ನು ಪ್ರಾಧ್ಯಾಪಕ ಪ್ರೊ. ರಾಮಕೃಷ್ಣ ಬಿ.ಬಿ. ನಿರೂಪಿಸಿದರು. ಗೀತಾ ಕೆ.ಎಂ. ಪ್ರಾರ್ಥನೆ ನೆರವೇರಿಸಿದರು. ಗ್ರಂಥಪಾಲಕ ಕುಮಾರ್ ಜಿ.ಎನ್. ವಂದಿಸಿದರು.