ವೀರಾಜಪೇಟೆ, ಡಿ. ೨೩: ಅಮ್ಮತ್ತಿ-ಒಂಟಿಯAಗಡಿಯ ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ಒಟ್ಟು ರೂ. ೨೪.೨೮ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ನಿವೃತ್ತ ಕರ್ನಲ್ ಕಂಡ್ರತAಡ ಸಿ ಸುಬ್ಬಯ್ಯ ತಿಳಿಸಿದರು.

ಅಮ್ಮತ್ತಿ-ಒಂಟಿಯAಗಡಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ನಡೆದ ೩೯ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಸದಸ್ಯರಿಗೆ ಶೇ. ೧೦ ರಷ್ಟು ಡಿವಿಡೆಂಡ್ ನೀಡಲಾಗುವುದು, ಸಂಘದಲ್ಲಿ ಒಟ್ಟು ೧೪೨೯ ಸದಸ್ಯರಿದ್ದು, ಪಾಲು ಬಂಡವಾಳ ರೂ. ೮೧,೫೯,೬೯೪ ಆಗಿದೆ. ಸಂಘದಲ್ಲಿ ಕೆಸಿಸಿ ಕೃಷಿ ಸಾಲ, ಸ್ವ-ಸಹಾಯ ಗುಂಪು ಸಾಲ, ವ್ಯಾಪಾರ ಸಾಲ, ಜಾಮೀನು ಸಾಲ, ಆಭರಣ ಸಾಲ, ಜಂಟಿ ಭಾದ್ಯತಾ ಗುಂಪು ಸಾಲ, ನಿತ್ಯ ನಿಧಿ ಠೇವಣಿ ಸಾಲ, ನಿರಖು ಠೇವಣಿ ಸಾಲ ಹಾಗೂ ಸಂಬಳಾಧಾರಿತ ಸಾಲ ಸೇರಿ ಒಟ್ಟು ರೂ. ೮,೦೪,೨೮,೦೯೯ ರಷ್ಟು ಸಾಲ ವಿತರಿಸಲಾಗಿದೆ.

ಸಂಘವು ೨೦೧೯-೨೦ನೇ ಸಾಲಿನಲ್ಲಿ ರೂ. ೪೮,೯೦,೬೩,೯೭೧ ವ್ಯವಹಾರ ನಡೆಸಿದ್ದು ದುಡಿಯುವ ಬಂಡವಾಳ ರೂ. ೧೧,೪೮,೬೧,೩೩೬ ಆಗಿರುತ್ತದೆ ಎಂದು ತಿಳಿಸಿದರು.

ನಿರಖು ಠೇವಣಿಗೆ ಶೇ.೮.೫ರ ಬಡ್ಡಿ ನೀಡುತ್ತಿದ್ದು ಸದಸ್ಯರು ಸಂಘದಲ್ಲಿ ವ್ಯವಹರಿಸುವ ಮೂಲಕ ತಮ್ಮಲ್ಲಿರುವ ಹಣವನ್ನು ಸಂಘದಲ್ಲಿ ಠೇವಣಿ ನೀಡುವ ಮೂಲಕ ಸಂಘಕ್ಕೆ ಬಂಡವಾಳ ಕ್ರೋಢಿಕರಿಸಲು ಮತ್ತು ಸದಸ್ಯರುಗಳು ಸಂಘದಲ್ಲೇ ಮಾರಾಟ ಮಾಡುತ್ತಿರುವ ರಸಗೊಬ್ಬರ, ಹತ್ಯಾರು ಇತ್ಯಾದಿಗಳನ್ನು ಖರೀದಿಸಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವಂತೆ ಕೋರಿದರು.

ಉಪಾಧ್ಯಕ್ಷÀ ವಿ.ಆರ್. ಹರೀಶ್, ನಿರ್ದೇಶಕರಾದ ಪೊರ್ಕೊಂಡ ಬಿ. ಸವಿತಾ, ಬೊಪ್ಪಂಡ ಪಿ. ಗಣಪತಿ, ಅಪ್ಪಾರಂಡÀ ಎಂ. ಕಾರ್ಯಪ್ಪ, ಕೊಪ್ಪಡ ಎಂ. ಗಣೇಶ್, ಕೆ.ಎಸ್. ದಿನೇಶ್, ಜಿಲ್ಲಂಡ ಸಿ. ಉತ್ತಪ್ಪ, ಪಿ.ಎ. ಮಂಜುನಾಥ್À, ವಿ.ಆರ್. ಪ್ರಭಾವತಿ, ಹೆಚ್. ತಮ್ಮಯ್ಯ ಸಂಘದ ಮೇಲ್ವಿಚಾರಕ ಶಂಕರ ಹಾಗೂ ಸಂಘದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ತಾತಂಡ ಡಿ. ಭೀಮಯ್ಯ ಉಪಸ್ಥಿತರಿದ್ದರು.