ಮಡಿಕೇರಿ, ಡಿ. 22: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ-ಆಡಳಿತಕ್ಕೆ ಸಂಬಂಧಿಸಿ ದಂತೆ ಭದ್ರಬುನಾದಿಯಾಗಿರುವ, ಸ್ಥಳೀಯ ಸರಕಾರವೆಂದೇ ಬಿಂಬಿತವಾಗಿರುವ ಗ್ರಾಮ ಪಂಚಾ ಯಿತಿಗಳಿಗೆ ಚುನಾವಣೆ ಇಂದು ಜಿಲ್ಲೆಯಲ್ಲಿ ನಡೆಯಿತು. ಕೆಲವೊಂದು ಕ್ಷೇತ್ರಗಳಲ್ಲಿ ಲಾಠಿ ಪ್ರಹಾರ, ಮತ ದಾನ ಬಹಿಷ್ಕಾರ ನಡೆದವಾದರೂ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿ ಜರುಗಿತು.ಪ್ರಸಕ್ತ ಸಾಲಿನ ಈ ಚುನಾವಣೆ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ನಡೆಯುತ್ತಿದ್ದು, ಮೊದಲ ಹಂತದಲ್ಲಿ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ಗ್ರಾ.ಪಂ.ಗಳಿಗೆ ಚುನಾವಣಾ ಪ್ರಕ್ರಿಯೆ ಇಂದು ನಡೆಯಿತು.ಗ್ರಾ.ಪಂ.ಗಳ ಈ ಹಿಂದಿನ ಆಡಳಿತ ಅವಧಿ ಕೆಲವು ತಿಂಗಳ ಹಿಂದೆಯೇ ಪೂರ್ಣಗೊಂಡಿತ್ತಾದರೂ ಕೊರೊನಾ ಕಾರಣದಿಂದಾಗಿ ಈ ಚುನಾವಣೆ ಈ ತನಕ ಮುಂದೂಡಲ್ಪಟ್ಟಿತ್ತು. ಇದೀಗ ಹಲವು ಮುಂಜಾಗ್ರತೆಯ ನಡುವೆ ಚುನಾವಣೆ ನಡೆದಿದೆ.ಚುನಾವಣೆಗಾಗಿ ಕಳೆದ ಹಲವು ಸಮಯಗಳಿಂದಲೇ ಸ್ಪರ್ಧಾ ಕಾಂಕ್ಷಿಗಳು-ರಾಜಕೀಯ ಪಕ್ಷಗಳು ಅಗತ್ಯ ಸಿದ್ಧತೆಗಳನ್ನು ನಡೆಸುತ್ತಲೇ ಬಂದಿದ್ದ ಹಿನ್ನೆಲೆಯಲ್ಲಿ ಹಲವು ಏಳು-ಬೀಳುಗಳ ನಡುವೆಯೂ ಈ ಬಾರಿಯ ಚುನಾವಣೆ ಭಾರೀ ಕುತೂಹಲ-ಸ್ಪರ್ಧೆಯನ್ನು ಕಾಣುವಂತಾಗಿದೆ.
ಇಂದು ಬೆಳಿಗ್ಗೆಯಿಂದÀ ಎರಡು ತಾಲೂಕಿನಲ್ಲಿ ಬಿರುಸಿನ ಚಟುವಟಿಕೆಗಳು ಕಂಡುಬಂದವು. ಮಡಿಕೇರಿ ತಾಲೂಕಿನ 26 ಗ್ರಾ.ಪಂ. ಹಾಗೂ ಸೋಮವಾರಪೇಟೆ ತಾಲೂಕಿನ 66 ಗ್ರಾ.ಪಂ.ಗಳಿಗೆ ಮೊದಲ ಹಂತದ ಚುನಾವಣೆ ಇದೀಗ ಮುಕ್ತಾಯಗೊಂಡಿದೆ. ಮಡಿಕೇರಿ ತಾಲೂಕಿನ 135 ಮತ ಗಟ್ಟೆಗಳು ಹಾಗೂ ಸೋಮವಾರಪೇಟೆ ತಾಲೂಕಿನ 222 ಮತಗಟ್ಟೆಗಳಲ್ಲಿ ಮತ ದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.ಮಡಿಕೇರಿ ತಾಲೂಕಿನ 108 ಕ್ಷೇತ್ರಗಳ 267 ಸ್ಥಾನಕ್ಕೆ ಒಟ್ಟು 676 ಮಂದಿ ಕಣದಲ್ಲಿದ್ದರೆ, ಸೋಮವಾರ ಪೇಟೆ ತಾಲೂಕಿನ 177 ಕ್ಷೇತ್ರಗಳ 462 ಸ್ಥಾನಗಳಿಗೆ ಒಟ್ಟು 1488 ರಷ್ಟು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ಕುರಿತಾಗಿ ಆಯಾ ವಿಭಾಗದ ಮತದಾರರು ತಮ್ಮ ಅಭಿಪ್ರಾಯವನ್ನು ಮತದ ಹಕ್ಕಿನ ಮೂಲಕ ಚಲಾಯಿಸಿದ್ದಾರೆ.
ತಾಲೂಕುವಾರು ವಿವರ : ಮಡಿಕೇರಿ ತಾಲೂಕಿನಲ್ಲಿ ಈಗಾಗಲೇ 24 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಉಳಿದ ಸ್ಥಾನಗಳಿಗೆ ಇಂದು ನಡೆದ ಚುನಾವಣೆ ಯಲ್ಲಿ ಮತದಾನವಾಗಿದೆ. ತಾಲೂಕಿನಲ್ಲಿ 45 ಸೂಕ್ಷ್ಮ ಮತಗಟ್ಟೆಗಳು, 6 ಅತಿಸೂಕ್ಷ್ಮ ಮತಗಟ್ಟೆಗಳು, 8 ನಕ್ಸಲ್ ಪೀಡಿತ ಮತಗಟ್ಟೆಗಳು ಹಾಗೂ 80 ಸಾಮಾನ್ಯ ಮತಗಟ್ಟೆಗಳಲ್ಲಿ ಚುನಾವಣೆ ಜರುಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಲ್ಲಾ ಮತಗಟ್ಟೆಗಳಲ್ಲಿ ಅಗತ್ಯ ಸಿದ್ಧತೆ ಗಳನ್ನು ಮಾಡಿದ್ದು, ಸೂಕ್ತ ಬಂದೋ ಬಸ್ತ್‍ನಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು.(ಮೊದಲ ಪುಟದಿಂದ) ಪ್ರಸ್ತುತ ಜಿಲ್ಲೆಯಲ್ಲಿ ಚಳಿಯ ವಾತಾವರಣವಿದ್ದರೂ ಚುನಾವಣೆಯ ಬಿರುಸು ಬಹುತೇಕ ಎಲ್ಲೆಡೆ ಕಂಡುಬಂದಿತು. ಕೋವಿಡ್ ಕಾರಣದ ನಿರ್ಬಂಧದ ಹಿನ್ನೆಲೆಯಲ್ಲಿ ಮತದಾರರು ಮಾಸ್ಕ್ ಧರಿಸುವುದ ರೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದರು. ಸ್ಥಳೀಯವಾದ ಅಭ್ಯರ್ಥಿಗಳೆÉೀ ಈ ಚುನಾವಣೆಯಲ್ಲಿ ಸ್ಪರ್ಧಿಗಳಾಗಿರುವುದರಿಂದ ವಿಧಾನಸಭೆ ಅಥವಾ ಲೋಕಸಭಾ ಚುನಾವಣೆಗಿಂತಲೂ ಈ ಚುನಾವಣೆ ಆಯಾ ವಿಭಾಗದಲ್ಲಿ ತೀವ್ರ ಕುತೂಹಲ ಸೃಷ್ಟಿಸುವುದರಿಂದ ಚುನಾವಣೆಯ ಬಿರುಸು, ಅಭ್ಯರ್ಥಿಗಳು, ರಾಜಕೀಯ ಪಕ್ಷದವರು ತಮ್ಮ ತಮ್ಮ ಬೆಂಬಲಿತರ ಪರವಾಗಿ ಮತದಾರರ ಮನವೋಲಿಸುವ ಕಾರ್ಯದಲ್ಲಿ ನಿರತರಾಗಿದ್ದರು.
ಸೋಮವಾರಪೇಟೆ ತಾಲೂಕು
ಸೋಮವಾರಪೇಟೆ ತಾಲೂಕಿನ ಗ್ರಾ.ಪಂ.ಗಳಿಗೂ ಬಿರುಸಿನ ಮತದಾನ ನಡೆಯಿತು. ಹೆಬ್ಬಾಲೆಯಲ್ಲಿ ತುಸು ಗೊಂದಲವುಂಟಾಗಿ ಪೊಲೀಸರು ಲಾಠಿ ಬೀಸಿದ ಪ್ರಸಂಗವೂ ನಡೆದಿದ್ದು, ಉಳಿದೆಡೆ ಶಾಂತಿಯುತ ಮತದಾನವಾಗಿದೆ. ಈ ತಾಲೂಕಿನಲ್ಲಿ ಈಗಾಗಲೇ 13 ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಉಳಿದ 462 ಸ್ಥಾನಗಳಿಗೆ ಇಂದು ಚುನಾವಣೆ ನಡೆದಿದೆ.
ಕೊರೊನಾ ಸೋಂಕಿತರಿಂದಲೂ ಹಕ್ಕು ಚಲಾವಣೆ
ಪ್ರಸ್ತುತ ಕೊರೊನಾ ಸೋಂಕಿತರಾಗಿರುವ ವ್ಯಕ್ತಿಗಳಿಗೂ ಸಂಜೆ 4 ರಿಂದ 5ರ ವರೆಗೆ ಮತದಾನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 59 ಸೋಂಕಿತರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, ಎರಡು ತಾಲೂಕಿನಲ್ಲಿ ತಲಾ 12 ಮಂದಿ ಸೇರಿ 24 ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಎರಡೂ ತಾಲೂಕಿನಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಹಾಗೂ ಇತರ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಮೊದಲ ಹಂತದ ಚುನಾವಣೆ ಸುಸೂತ್ರವಾಗಿ ಮುಕ್ತಾಯಗೊಂಡಿದೆ.