ವೀರಾಜಪೇಟೆ, ಡಿ. ೨೩: ೨೦೨೦-೨೧ನೇ ಸಾಲಿನಲ್ಲಿ ವಿವಿಧ ಕಾರಣಗಳಿಂದ ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳನ್ನು ಗುರುತಿಸಿ ಶಾಲೆಗೆ ಹಾಜರಾಗಲು ಮತ್ತು ಶಾಲಾ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಮನೆ -ಮನೆ ಸಮೀಕ್ಷೆ ಕೈಗೊಳ್ಳಲಾಗಿದೆ. ಪಂಚಾಯಿತಿ ಕಚೇರಿಯಿಂದ ನಿಯೋಜಿಸಿರುವ ಸಿಬ್ಬಂದಿಗಳು ಮನೆ ಗಳಿಗೆ ಭೇಟಿ ನೀಡಿದಾಗ ಅಗತ್ಯ ದಾಖಲೆಗಳೊಂದಿಗೆ ಮಾಹಿತಿ ನೀಡಲು ಕೋರಲಾಗಿದೆ.

ಅಲ್ಲದೆ, ತೆರಿಗೆ, ಮನೆ ಕಂದಾಯ, ನೀರಿನ ಕರ, ಅಂಗಡಿ-ಮಳಿಗೆ ಬಾಡಿಗೆ ಮತ್ತು ಉದ್ದಿಮೆ ಪರವಾನಿಗೆಯನ್ನು ಪಾವತಿಸಿ ಸಾರ್ವಜನಿಕರು ಸಹಕರಿಸ ಬೇಕಾಗಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.