ಶನಿವಾರಸಂತೆ, ಡಿ. 22: ನಿಡ್ತ ಪಂಚಾಯಿತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 2019-20ನೇ ಸಾಲಿನಲ್ಲಿ ರೂ.23,55,519 ಲಕ್ಷ ಲಾಭಗಳಿಸಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಎನ್.ಬಿ. ನಾಗಪ್ಪ ಹೇಳಿದರು.

ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸಂಘ ಪ್ರಗತಿ ಪಥದತ್ತ ಸಾಗುತ್ತಿದ್ದು, ಸಂಘದಲ್ಲಿ 2481 ಸದಸ್ಯರಿದ್ದು, ಸದಸ್ಯರ ಷೇರು ಹಣ ರೂ. 1 ಕೋಟಿ 29 ಲಕ್ಷ ಇರುತ್ತದೆ. ಸರಕಾರದ ಶೇರು ರೂ.2 ಲಕ್ಷ 18 ಸಾವಿರ ಇರುತ್ತದೆ. ಡಿಸಿಸಿ ಬ್ಯಾಂಕಿನಿಂದ 10 ಕೋಟಿ 70 ಲಕ್ಷ ಪಡೆದು ಪೂರ್ತಿ ಪಾವತಿಸಿದೆ. ಸರ್ಕಾರದ ಬಡ್ಡಿ ಸಹಾಯಧನ ಬರಲು ಬಾಕಿ 22 ಲಕ್ಷದ 63 ಸಾವಿರ ಇದ್ದು, ಪೂರ್ತಿ ಬಂದರೆ ಮುಂದಿನ ಸಾಲಿಗೂ ಲಾಭ ಬರುತ್ತದೆ. 64 ಸ್ವಸಹಾಯ ಗುಂಪುಗಳಿದ್ದು, ಗುಂಪಿನ ಉಳಿತಾಯ 8 ಲಕ್ಷದ 68 ಸಾವಿರ ಇದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಗತಿ ಪಥದತ್ತ ಸಾಗುತ್ತಿದೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ಸಿ.ಪಿ. ತೀರ್ಥಾನಂದ, ನಿರ್ದೇಶಕರುಗಳಾದ ಹೆಚ್.ಪಿ. ಶೇಷಾದ್ರಿ, ಡಿ.ಬಿ. ಧರ್ಮಪ್ಪ, ಬಿ.ಎಂ. ಸರಳಾಕ್ಷಿ, ಎಂ.ಎಸ್. ತಂಗಮ್ಮ, ಜಿ.ಬಿ. ಲಿಂಗರಾಜು, ಎಸ್.ಆರ್. ಕಾರ್ತಿಕ್, ಡಿ.ಎನ್. ಜಗದೀಶ್, ಹೆಚ್.ಎಂ. ದೊಡ್ಡೇಗೌಡ, ಎನ್.ಆರ್. ಪುಟ್ಟಯ್ಯ, ಶನಿವಾರಸಂತೆ ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ರಘು ಹಾಗೂ ಹೆಚ್.ಟಿ. ನವೀನ್ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿವರ್ವಹಣಾಧಿಕಾರಿ ವರದಿ ಮಂಡಿಸಿದರು. ನಿರ್ದೇಶಕ ಹೆಚ್.ಪಿ. ಶೇಷಾದ್ರಿ ಸ್ವಾಗತಿಸಿ, ನಿರ್ದೇಶಕ ಡಿ.ಬಿ. ಧರ್ಮಪ್ಪ ವಂದಿಸಿದರು.