ಸೋಮವಾರಪೇಟೆ, ಡಿ. ೨೩ : ಇಲ್ಲಿನ ಶ್ರೀರಾಮ ಮಂದಿರದ ಕುರುಹಿನಶೆಟ್ಟಿ ಸಮಾಜದ ವತಿಯಿಂದ ತಾ. ೨೫ರಂದು (ನಾಳೆ) ನಾಲ್ಕನೇ ವರ್ಷದ ವೈಕುಂಠ ಏಕಾದಶಿ ಪೂಜೋತ್ಸವ ನಡೆಯಲಿದೆ ಎಂದು ಸಮಾಜದ ಅಧ್ಯಕ್ಷ ಸತಿನ್ ಸಿದ್ದಪ್ಪ ತಿಳಿಸಿದ್ದಾರೆ.
ತಾ. ೨೫ ರಂದು ಬೆಳಿಗ್ಗೆ ೭ ರಿಂದ ೧೦ರವರೆಗೆ ಮತ್ತು ಸಂಜೆ ೫ ರಿಂದ ೮.೩೦ ರವರೆಗೆ ಸ್ವರ್ಗದ ಬಾಗಿಲ ಪ್ರವೇಶ ಮತ್ತು ದೇವರ ದರ್ಶನ ಇರುತ್ತದೆ. ಸಂಜೆ ೬ ರಿಂದ ಶ್ರೀಮಾತಾ ಭಜನಾ ಮಂಡಳಿಯ ವತಿಯಿಂದ ವಿಷ್ಣು ಸಹಸ್ರನಾಮ ಪಠಣ, ೭ ರಿಂದ ೮ ರವರೆಗೆ ಶ್ರೀನಿಧಿಯವರಿಂದ ಭಗವದ್ ಗೀತೋಪದೇಶ, ೮.೧೫ಕ್ಕೆ ಮಹಾಮಂಗಳಾರತಿ, ೮.೩೦ಕ್ಕೆ ಪ್ರಸಾದ ವಿನಿಯೋಗ ನಡೆಯಲಿದೆ.