ಕಡಂಗ, ಡಿ. ೨೩: ಎಸ್‌ಎಸ್‌ಎಫ್ ರಾಜ್ಯ ಸಮಿತಿಯ ಆದೇಶದನ್ವಯ ರಾಜ್ಯದ ವಿವಿಧ ಶಾಖೆಗಳಲ್ಲಿ ನಡೆಸಲ್ಪಡುವ ವಾರ್ಷಿಕ ಕೌನ್ಸಿಲ್ ಪ್ರಯುಕ್ತ ಎಮ್ಮೆಮಾಡಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸೆಂಟ್ರಲ್ ಶಾಖೆಯ ವಾರ್ಷಿಕ ಜನರಲ್ ಬೋಡಿಯನ್ನು ಶಾಖಾಧ್ಯಕ್ಷ ನಝೀರ್ ಬಾಖವಿ ಅಧ್ಯಕ್ಷತೆಯಲ್ಲಿ ಪುದಿಯಾರೆ ಹನೀಫ್ ಅವರ ಮನೆಯಲ್ಲಿ ನಡೆಸಲಾಯಿತು.
ಸೊಗಸಾದ ರೀತಿಯಲ್ಲಿ ತರಗತಿಯನ್ನು ಎಮ್ಮೆಮಾಡು ಈಸ್ಟ್ ಅಧ್ಯಕ್ಷ ಫಾರೂಕ್ ಅಹ್ಮದ್ ನಡೆಸಿಕೊಟ್ಟರು. ಉದ್ಘಾಟನೆಯನ್ನು ಎಸ್‌ಎಸ್‌ಎಫ್ ಜಿಲ್ಲಾ ಕಾರ್ಯಕಾರಣಿ ಸದಸ್ಯ ಶೌಕತ್ ಎಮ್ಮೆಮಾಡು ನಿರ್ವಹಿಸಿದರು. ವೀಕ್ಷಕರಾಗಿ ಆಗಮಿಸಿದ ಎಸ್‌ಎಸ್‌ಎಫ್ ಮಡಿಕೇರಿ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಸಲಾಹುದ್ದೀನ್ ಕೊಟ್ಟಮುಡಿ ಮತ್ತು ರಶೀದ್ ಮುಸ್ಲಿಯಾರ್ ನೂತನ ಸಾರಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ಮತ್ತು ಮುಂದಾಳತ್ವ ವಹಿಸಿದರು. ವರದಿವಾಚನ ಹಾಗೂ ಲೆಕ್ಕಪತ್ರ ಮಂಡನೆ ಕಾರ್ಯದರ್ಶಿ ನೌಹಾರ್ ಮಂಡಿಸಿದರು. ಮಹಾಸಭೆಯಲ್ಲಿ ಹಲವಾರು ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರುಗಳು ಉಪಸ್ಥಿತರಿದ್ದರು. ಹಾರಿಸ್ ಬಿ.ಎಂ. (ಅಧ್ಯಕ್ಷರು) ಸ್ವಾದಿಕ್ ಸಅದಿ ಅಲ್ ಹಾದಿ, ಜಂಶೀರ್ ಅನ್ವಾರಿ (ಉಪಾಧ್ಯಕ್ಷರು) ಶರೀಫ್ (ಪ್ರಧಾನ ಕಾರ್ಯದರ್ಶಿ)ಗಳಾಗಿ ಆಯ್ಕೆಯಾದರು.
ಶಾಫಿ ಕೆ.ಹೆಚ್., ಮಶ್ಹೂದ್, ಝಿಯಾದ್, ಹಾಫಿಲ್ ಶಮ್ಮಾಸ್, ರಿಯಾಸ್ ಕಾರ್ಯದರ್ಶಿಗಳು ಹಾಜರಿದ್ದರು.