ಗೋಣಿಕೊಪ್ಪಲು, ಡಿ.21: ಶತಮಾನಗಳಿಂದಲೂ ವಾಸಿಸುತ್ತಿರುವ ಬಾಳೆಲೆ ಹೋಬಳಿಯ ಪೊನ್ನಪ್ಪಸಂತೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೂಪದಕೊಲ್ಲಿ ಪೈಸಾರಿ ನಿವಾಸಿಗಳು ತಮಗೆ ಮೂಲಭೂತ ಸೌಕರ್ಯಗಳಲ್ಲಿ ಅತ್ಯಾವಶ್ಯಕವಿರುವ ರಸ್ತೆ ಮಾರ್ಗವನ್ನು ಸರಿ ಪಡಿಸಿಕೊಡುವಂತೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ ಇದರಿಂದ ಬೇಸತ್ತ ಇಲ್ಲಿನ ಗ್ರಾಮಸ್ಥರು, ಮಕ್ಕಳು, ಮಹಿಳೆಯರಾದಿಯಾಗಿ ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಪ್ರತಿಭಟನೆ ನಡೆಸಿದ್ದರು.

ಇದರಿಂದ ಎಚ್ಚೆತ್ತ ಜಿಲ್ಲಾಡಳಿತವು ವೀರಾಜಪೇಟೆ ತಾಲೂಕು ತಹಶಿಲ್ದಾರ್ ಯೋಗನಂದ್ ಅವರನ್ನು ಗ್ರಾಮಕ್ಕೆ ಕಳುಹಿಸಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುವಂತೆ ನಿರ್ದೇಶನ ನೀಡಿತ್ತು. ಜಿಲ್ಲಾಡಳಿತದ ಸೂಚನೆ ಮೇರೆಗೆ ತೆರಳಿದ ತಹಶಿಲ್ದಾರ್ ಗ್ರಾಮಸ್ಥರೊಂದಿಗೆ ಮೂಲ ಸೌಕರ್ಯದ ಬಗ್ಗೆ ಸಮಗ್ರ ಮಾಹಿತಿ ಪಡೆದು ಚುನಾವಣೆಯ ನಂತರ ಗ್ರಾಮಕ್ಕೆ ಆಗಮಿಸಿ ರಸ್ತೆ ಕಲ್ಪಿಸುವ ಬಗ್ಗೆ ಭರವಸೆ ನೀಡಿದರು.

ತಹಶಿಲ್ದಾರ್ ಭರವಸೆÉ ಹಿನ್ನೆಲೆ ಮತ ಬಹಿಷ್ಕಾರವನ್ನು ಹಿಂಪಡೆÀದು ಚುನಾವಣೆಯಲ್ಲಿ ಮತ ಚಲಾಯಿಸುವುದಾಗಿ ಗ್ರಾಮದ ಜನತೆಯ ಪರವಾಗಿ ಗ್ರಾಮದ ಮುಖಂಡರಾದ ಹೆಚ್.ಎಂ.ರಾಜಣ್ಣ, ಪಿ.ಎ.ಸುನಿಲ್, ಪಿ.ಎಸ್.ತಿರುಶ್ ತಿಳಿಸಿದರು. ತಹಶೀಲ್ದಾರ್ ಭೇಟಿಯ ವೇಳೆ ಗ್ರಾಮದ ಪ್ರಮುಖರಾದ ಸುಬ್ರಮಣಿ, ಎಂ.ಆರ್.ಮಾದೇಶ್, ವೈ.ಬಿ.ಗಣೇಶ್, ಪಿ.ಎಸ್. ಗುರುರಾಜ್, ಪಿ.ಜೆ.ಮಣಿ, ಪಿ.ಎ.ಮಂಜುನಾಥ್, ಪಳನಿಸ್ವಾಮಿ, ಪಿ.ಬಿ.ರಾಮಚಂದ್ರ, ಸೇರಿದಂತೆ ಇನ್ನಿತರರು ಹಾಜರಿದ್ದರು.