ವೀರಾಜಪೇಟೆ, ಡಿ. 20: ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಹಾಗೂ ತಾಲೂಕು ವತಿಯಿಂದ ಇಲ್ಲಿನ ನಿರ್ಮಲಗಿರಿಯಲ್ಲಿರುವ ಸ್ನೇಹಭವನದ ವೃದ್ಧಾಶ್ರಮದಲ್ಲಿನ ವೃದ್ಧರಿಗೆ ಅಪರಾಹ್ನ ಅನ್ನಸಂತರ್ಪಣೆ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಈ ಸಂದರ್ಭ ಜೆ.ಡಿಎಸ್. ಪಕ್ಷದ ಕ್ಷೇತ್ರ ಅಧ್ಯಕ್ಷ ಎಸ್.ಹೆಚ್. ಮತೀನ್, ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್, ಯುವ ಮುಖಂಡರಾದ ಚಿಲ್ಲವಂಡ ಗಣಪತಿ, ಯೋಗೀಶ್ ನಾಯ್ಡು ಪಕ್ಷದ ಕಾರ್ಯಕರ್ತರು ಹಾಜರಿದ್ದರು.