*ಗೋಣಿಕೊಪ್ಪಲು, ಡಿ. 20: ಬಾಳೆಲೆ ನಿವಾಸಿಯಾಗಿದ್ದ ಪೆÇೀಡಮಾಡ ಉತ್ತಪ್ಪ ಅವರ ಸಾವಿಗೆ ಸಂಬಂಧಿಸಿದಂತೆ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲಚೀರ ಬೋಸ್ ಚಿಟ್ಟಿಯಪ್ಪ ಆಡಳಿತ ಮಂಡಳಿಯ ಸರ್ವ ಸದಸ್ಯರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೋಸ್ ಚಿಟ್ಟಿಯಪ್ಪ, ಬಾಳೆಲೆಯ ಪೆÇೀಡಮಾಡ ಉತ್ತಪ್ಪ ಅವರ ಸಾವು ಸಹಜ ಸಾವಲ್ಲ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ಕೊಡವ ಸಮಾಜ ಹಾಗೂ ಬಾಳೆಲೆ ಕೇಂದ್ರದ ಕೊಡವ ಜನಾಂಗದವರ ಆಗ್ರಹವಾಗಿದೆ ಎಂದು ಹೇಳಿದರು.