ಮಡಿಕೇರಿ, ಡಿ. 19 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಡೆಸುತ್ತಿರುವ ರೆಗ್ಯೂಲರ್ ಡಿಸಿಎಂ ತರಬೇತಿಯ ಅಂತಿಮ ಪರೀಕ್ಷೆಯಲ್ಲಿ ನಗರದ ತರಬೇತಿ ಸಂಸ್ಥೆಯ 5 ವಿದ್ಯಾರ್ಥಿಗಳು ರ್ಯಾಂಕ್ ಪಡೆದು ಶೇಕಡ ನೂರು ಫಲಿತಾಂಶ ಗಳಿಸಿದೆ ಎಂದು ಸಹಕಾರ ಡಿಪ್ಲೋಮಾ ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಡಾ. ರೇಣುಕಾ ಆರ್.ಎಸ್ ತಿಳಿಸಿದ್ದಾರೆ.
ಪವಿತ್ರ ಎಂ.ಬಿ. ಮೊದಲ ರ್ಯಾಂಕ್, ಇಂದುಶ್ರೀ ಪಿ. ಎರಡನೇ ರ್ಯಾಂಕ್, ಪ್ರಿಯ ಸೋಮಯ್ಯ 5ನೇ ರ್ಯಾಂಕ್, ಜಯಶ್ರೀ ಎಂ.ಸಿ ಹಾಗೂ ನಂಜುಂಡಸ್ವಾಮಿ ಎಸ್.ಬಿ 9ನೇ ರ್ಯಾಂಕ್ ಪಡೆದಿದ್ದಾರೆ.