ಮಡಿಕೇರಿ, ಡಿ. 19 : ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಬೆಂಗಳೂರಿನ ಬಾಕ್ಸ್ತರ್ ಇನೋವೇಶನ್ಸ್ ಅಂಡ್ ಬ್ಯುಸಿನೆಸ್ ಸೊಲ್ಯೂಷನ್ಸ್ ಸಂಸ್ಥೆಯು ಕೋವಿಡ್ ಸಂಬಂಧಿತ ಅನೇಕ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯಸ್ಥ ಡಾ.ಕಾರ್ಯಪ್ಪ ಅವರು ಸಾಮಗ್ರಿಗಳನ್ನು ಸ್ವೀಕರಿಸಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಬಾಕ್ಸ್ತರ್ ಸಂಸ್ಥೆಯ ವತಿಯಿಂದ 4500 ಮಾಸ್ಕ್, 750 ಫೇಸ್ ಶೀಲ್ಡ್, 750 ಸ್ಯಾನಿಟೈಸರ್, 5 ಸ್ಯಾನಿಟೈಸರ್ ಸ್ಟಾಂಡ್‍ಗಳನ್ನು ನೀಡಲಾಗಿದೆ.

ನಗರದ ಕೊಡಗು ವಿದ್ಯಾಲಯದ ವಿಶೇಷ ಮಕ್ಕಳ ಶಾಲೆಯಲ್ಲಿನ 55 ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಸಂಬಂಧಿತ ವಸ್ತುಗಳಾದ ಶಾಲಾ ಬ್ಯಾಗ್, ಜಾಮೆಟ್ರಿ ಪೆಟ್ಟಿಗೆ, ಕ್ರೇಯಾನ್ಸ್, ವಾಟರ್ ಬಾಟಲ್, ಲಂಚ್ ಬಾಕ್ಸ್, ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.