ಮಡಿಕೇರಿ, ಡಿ. 18: ತಾ. 20ರ ಸುಬ್ರಹ್ಮಣ್ಯ ಷಷ್ಠಿದಿನ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಪ್ರಸಕ್ತ ವರ್ಷ ಸಾರ್ವಜನಿಕ ಅನ್ನಸಂತರ್ಪಣೆ ಇರುವುದಿಲ್ಲ ಎಂದು ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್ ‘ಶಕ್ತಿ’ಗೆ ತಿಳಿಸಿದ್ದಾರೆ.ಕೋವಿಡ್ -19 ನಿಯಮಾನು ಸರಣೆ ಪ್ರಯುಕ್ತ ಅನ್ನಸಂತರ್ಪಣೆ ಯನ್ನು ಕೈ ಬಿಡಲಾಗಿದೆ. ಆದರೆ, ದೇವಾಲಯದಲ್ಲಿ ಎಂದಿನಂತೆ ಸಾರ್ವಜನಿಕ ಭಕ್ತಾದಿಗಳಿಗೆ ಪ್ರವೇಶಾವಕಾಶವಿದೆ. ಪೂಜಾದಿಗಳು ಎಂದಿನಂತೆ ನಡೆಯುತ್ತವೆ. ಭಕ್ತಾದಿಗಳು ಕೋವಿಡ್ -19 ನಿಯಮಗಳನ್ನು ಪಾಲಿಸಬೇಕು. ಸಂಜೆ 6 ಗಂಟೆಗೆ ತೆಪ್ಪೋತ್ಸವ ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿಯಿತ್ತರು.