ಕಡಂಗ, ಡಿ. 18: ಎಸ್‍ಐಎಸ್ ಕಡಂಗ ಶಾಖೆಯ ವತಿಯಿಂದ ತಾ. 16 ರಂದು ಕಡಂಗದಲ್ಲಿ ರಿಫಾ ಈ ಅನುಸ್ಮರಣೆ ಹಾಗೂ ಮೌಲಿದ್ ಮಜ್ಲಿಸ್ ನಡೆಯಿತು. ಮುಹ್ ಯಿದ್ದೀನ್ ಜುಮಾ ಮಸೀದಿಯ ಖತೀಬ ಹಮೀದ್ ದಾರಿಮಿ ಉದ್ಘಾಟಿಸಿ ದುಆ ಮಜ್ಲಿಸಿಗೆ ನೇತೃತ್ವ ನೀಡಿದರು. ಎಂ.ಯು.ಎಂ. ಸದರ್ ಮುಅಲ್ಲಿಂ ಸುಹೈಬ್ ಫೈಝಿ ಅನುಸ್ಮರಣಾ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷ ಇಬ್ರಾಹಿಂ, ಎಸ್‍ಐಎಸ್ ಕಡಂಗ ಶಾಖೆಯ ಅಧ್ಯಕ್ಷ ಯೂಸುಫ್ ಮುಸ್ಲಿಯಾರ್, ಪ್ರ. ಕಾರ್ಯದರ್ಶಿ ಅಬ್ದುಲ್ಲಾ ಹಾಜಿ, ಎಂ.ಯು.ಎಂ. ಮುಅಲ್ಲಿಂ ರಫೀಖ್ ದಾರಿಮಿ, ಟಿ.ಎಂ. ಅಬ್ದುರ್ರಹ್ಮಾನ್, ಪಿ.ಎ. ಮೊಯ್ದು, ಕೆ.ಎ. ಅಹ್ಮದ್, ಎಂ.ಬಿ. ಬಾವ ಹಾಗೂ ಎಸ್‍ಕೆಎಸ್‍ಎಸ್ ಕಾರ್ಯಕರ್ತರುಗಳು ಇನ್ನಿತರರು ಉಪಸ್ಥಿತರಿದ್ದರು.