ನಾಪೆÇೀಕ್ಲು, ಡಿ. 18: ಕಾಫಿ ಮಂಡಳಿ ಉಪ ಸಂಶೋಧನಾ ಕೇಂದ್ರ ಚೆಟ್ಟಳ್ಳಿ ಮತ್ತು ಯವಕಪಾಡಿ ಬೆಳೆಗಾರರ ಅಸೋಸಿಯೇಷನ್ ಇವರ ಜಂಟಿ ಆಶ್ರಯದಲ್ಲಿ ಈ ವಿಭಾಗದ ಕಾಫಿ ಬೆಳೆಗಾರರ ತೋಟಗಳಲ್ಲಿ ಮಣ್ಣು ಪರೀಕ್ಷೆಯನ್ನು ಕಕ್ಕಬ್ಬೆಯ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಸಲಾಯಿತು. ರೈತರಿಗೆ ಪ್ರಾತ್ಯಕ್ಷಿಕೆ ಮುಖಾಂತರ ಸ್ಥಳದಲ್ಲಿಯೇ ಪರೀಕ್ಷೆಯನ್ನು ನಡೆಸಿ ಕೂಡಲೇ ಫಲಿತಾಂಶವನ್ನು ನೀಡಲಾಯಿತು. ಮಣ್ಣಿನ ಫಲವತ್ತತೆಗೆ ಯಾವ ಗೊಬ್ಬರವನ್ನು ಬಳಸಬೇಕೆಂದು ಈ ಸಂದರ್ಭ ಬೆಳೆಗಾರರಿಗೆ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಯುವಕಪಾಡಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎನ್. ಸುರೇಶ್ ಬೆಳ್ಯಪ್ಪ, ಚೆಟ್ಟಳ್ಳಿ ಉಪ ಸಂಶೋಧನ ಕೇಂದ್ರದ ಅಧಿಕಾರಿ ಪ್ರಪುಲ್ಲ ಕುಮಾರಿ, ಕೀಟ ತಜ್ಞ ಟಿ.ವಿ.ಎಸ್. ಜೈನ್, ಮಣ್ಣು ಪರೀಕ್ಷೆ ತಜ್ಞ ರಂಜಿತ್ ಕುಮಾರ್, ನಾಪೆÇೀಕ್ಲು ಕಾಫಿ ಮಂಡಳಿಯ ಸಂಪರ್ಕಾಧಿಕಾರಿ ಮತ್ತು ಕಾಫಿ ಬೆಳೆಗಾರ ನರೇಶ್ ಹಾಗೂ ಗ್ರಾಮದ ಬೆಳೆಗಾರರು ಇದ್ದರು.
- ದುಗ್ಗಳ