*ಗೋಣಿಕೊಪ್ಪಲು, ಡಿ. 18: ಒಂದು ವಾರಗಳಿಂದ ತಿತಿಮತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಂಟಿ ಸಲಗದ ದಾಂಧÀಲೆ ಅಧಿಕವಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ಬೆಳಗ್ಗಿನ ಜಾವವೇ ಆಟದ ಮೈದಾನದಲ್ಲಿ ಆಡುತ್ತಿರುವ ಮಕ್ಕಳ ಮೇಲೆ ಆನೆ ದಾಳಿ ನಡೆಸಲು ಮುಂದಾಗುತ್ತಿದೆ. ಮಕ್ಕಳು ಇದರಿಂದ ಆಟ ಆಡಲು ಮೈದಾನಕ್ಕೆ ತೆರಳಲು ಭಯಗೊಳ್ಳುತ್ತಿದ್ದಾರೆ. ಅಲ್ಲದೇ ತೋಟಗಳಲ್ಲಿ ಸಂಚರಿಸುತ್ತಿರುವುದರಿಂದ ಬೆಳೆಗಾರರಿಗೆ ಫಸಲುಗಳ ನಷ್ಟ ಉಂಟಾಗುತ್ತಿದೆ. ಆದರೂ ಅರಣ್ಯ ಇಲಾಖೆ ಆನೆ ಓಡಿಸಲು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ದಿನದಿಂದ ದಿನಕ್ಕೆ ಒಂಟಿ ಸಲಗದ ಅಟ್ಟಹಾಸ ಮೀರುತ್ತಿದೆ. ತೋಟದಿಂದ ತೋಟಕ್ಕೆ ಸಂಚರಿಸುವ ಆನೆ ಮುಖ್ಯ ರಸ್ತೆಯಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಆನೆ ಓಡಿಸುವ ಕಾರ್ಯಕ್ಕೆ ಇಲಾಖೆ ಮುಂದಾಗಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

-ಎನ್. ಎನ್. ದಿನೇಶ್