ಗೋಣಿಕೊಪ್ಪ ವರದಿ, ಡಿ. 18: ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಮಾಯಮುಡಿ ಗ್ರಾಮದ ಕಮಟೆ ಮಹದೇವರ ದೇವಸ್ಥಾನದಲ್ಲಿ ತಾ. 20 ರಂದು ಪೂಜಾ ಕಾರ್ಯ ನಡೆಯಲಿದೆ.

ಬೆಳಿಗ್ಗೆ 10 ಗಂಟೆಗೆ ಗಣಪತಿಗೆ ಪಂಜಕಜ್ಜಾಯ, ಈಶ್ವರನಿಗೆ ಬಿಲ್ಪತ್ರ, ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ನಡೆಯಲಿದೆ. ತಲೆಮುಡಿ, ಸಾಮೂಹಿಕ ಅನ್ನದಾನವಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸಣ್ಣುವಂಡ ಬಿ. ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿಟ್ಟೂರುವಿನಲ್ಲಿ: ನಿಟ್ಟೂರು-ಕಾರ್ಮಾಡು ಕಾಲಭೈರವ ದೇವಸ್ಥಾನದಲ್ಲಿ ತಾ. 20 ರಂದು ಬೆಳಿಗ್ಗೆ 10 ಗಂಟೆಯಿಂದ ವಿವಿಧ ಪೂಜಾ ಕಾರ್ಯ ನಡೆಯಲಿದೆ. ತಲೆಮುಡಿ, ರುದ್ರಾಭಿಷೇಕ, ತುಲಾಭಾರ ಸೇವೆ ಇದೆ. ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ ನಂತರ ಅನ್ನದಾನ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.