ಮಡಿಕೇರಿ, ಡಿ. 18: ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ಬ್ಯಾಂಕ್‍ಗಳಲ್ಲಿ ಉದ್ಯೋಗ ನೀಡುವ ಉದ್ದೇಶದಿಂದ ಉಚಿತ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‍ನ ಮುಖ್ಯ ಪ್ರಬಂಧಕ ಆರ್.ಕೆ. ಬಾಲಚಂದ್ರ ಭಾಗವಹಿಸಲಿದ್ದಾರೆ. ತಾ. 25 ರಿಂದ ತಾ. 28 ರವರೆಗೆ ತರಬೇತಿ ಕಾರ್ಯಾಗಾರ ನಡೆಯಲಿದ್ದು, ನಬಾರ್ಡ್ ಸಂಸ್ಥೆ ಪ್ರಾಯೋಜಿಸಲಿದೆ. ಕಾರ್ಯಾಗಾರವನ್ನು ಸದುಪ ಯೋಗಿಸಿಕೊಳ್ಳಲು ನಬಾರ್ಡ್‍ನ ನಿವೃತ್ತ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ. ನಾಣಯ್ಯ ಕೋರಿದ್ದಾರೆ. 40 ಮಂದಿಗೆ ಮಾತ್ರ ಅವಕಾಶವಿದ್ದು ಹೆಚ್ಚಿನ ಮಾಹಿತಿಗಾಗಿ ಮೊ: 9449148705, 8660360594 ಅನ್ನು ಸಂಪರ್ಕಿಸಬಹುದು.