ಪೆÇನ್ನಂಪೇಟೆ, ಡಿ. 17: ಭಾರತೀಯ ಜೇಸಿಸ್‍ನ ವಲಯ 14ರಲ್ಲಿರುವ ಜೆ.ಸಿ.ಐ. ಪೆÇನ್ನಂಪೇಟೆ ನಿಸರ್ಗ (ನಿಸರ್ಗ ಜೇಸಿಸ್) ಘಟಕದ ಅಧ್ಯಕ್ಷರಾಗಿ ರಾಜ್ಯಶಾಸ್ತ್ರ ಉಪನ್ಯಾಸಕ ಎಂ.ಎನ್. ವನಿತ್ ಕುಮಾರ್ ಅವಿರೋಧವಾಗಿ ಪುನರ್ ಆಯ್ಕೆಗೊಂಡಿದ್ದಾರೆ.
ಗೋಣಿಕೊಪ್ಪಲಿನಲ್ಲಿ ನಡೆದ ಘಟಕದ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಈ ಪುನರ್ ಆಯ್ಕೆ ಪ್ರಕ್ರಿಯೆ ನಡೆದು, ಪ್ರಸಕ್ತ ಸಾಲಿನಲ್ಲಿ ಕೋವಿಡ್-19ರ ನಿರ್ಬಂಧದಿಂದಾಗಿ ಉದ್ದೇಶಿತ ಕಾರ್ಯ ಯೋಜನೆಗಳನ್ನು ನಡೆಸಲು ಸಾಧ್ಯವಾಗದ ಕಾರಣ 2020ನೇ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ವನಿತ್‍ಕುಮಾರ್ ಅವರ ನೇತೃತ್ವದ ಘಟಕಾಡಳಿತ ಮಂಡಳಿಯನ್ನು 2021 ಸಾಲಿಗೂ ಮುಂದುವರಿಸುವಂತೆ ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಘಟಕದ ಕಾರ್ಯದರ್ಶಿಯಾಗಿ ಎ.ಪಿ. ದಿನೇಶ್ (ದಿನು) ಮತ್ತು ಕೋಶಾಧಿಕಾರಿಯಾಗಿ ಕುಪ್ಪಂಡ ದಿಲನ್ ಅವರನ್ನು ಸಭೆ ಅವಿರೋಧವಾಗಿ ಪುನರಾಯ್ಕೆಗೊಳಿಸಿತು.
ಉಳಿದಂತೆ ಘಟಕಾಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಹೆಚ್.ಆರ್. ಸತೀಶ್ (ನಿರ್ವಹಣೆ), ಜಿ.ಪಿ. ಸ್ವಾಮಿ (ಕಾರ್ಯಕ್ರಮ), ಪಿ.ಎಂ. ಮೆಹರೂಫ್ (ತರಬೇತಿ), ಎನ್. ಜಿ. ಸುರೇಶ್ (ಅಭಿವೃದ್ಧಿ ಮತ್ತು ಬೆಳವಣಿಗೆ), ಜಂಟಿ ಕಾರ್ಯದರ್ಶಿಯಾಗಿ ಎಂ.ಬಿ. ನೀತ್ ಅಯ್ಯಪ್ಪ, ನಿರ್ದೇಶಕರುಗಳಾಗಿ ಕ್ಯಾ. ಬಿ.ಎಂ. ಗಣೇಶ್, ಎಂ.ಎಸ್. ಸರ್ಫುದ್ದೀನ್, ಪಿ.ಪಿ. ಬಿದ್ದಪ್ಪ ಮತ್ತು ಶಿವಕುಮಾರ್ ಅವರನ್ನು ಪುನರಾಯ್ಕೆ ಗೊಳಿಸಲಾಯಿತು. ಘಟಕದ ಜೇಸಿರೇಟ್ ವಿಭಾಗದ ಮುಖ್ಯಸ್ಥರಾಗಿ ಕೆ. ಜಸ್ಮಿ ಬೋಪಣ್ಣ ಹಾಗೂ ಜೂನಿಯರ್ ಜೇಸಿ ವಿಭಾಗದ ಮುಖ್ಯಸ್ಥರಾಗಿ ಎ.ಡಿ. ಚರಣ್ ಚಂಗಪ್ಪ ಅವರನ್ನು ಸಹ ಇದೇ ಸಂದರ್ಭದಲ್ಲಿ ಪುನರ್ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಘಟಕದ ಸ್ಥಾಪಕಾಧ್ಯಕ್ಷರಾದ ರಫೀಕ್ ತೂಚಮಕೇರಿ, ಪೂರ್ವಾಧ್ಯಕ್ಷರಾದ ಬಿ.ಈ. ಕಿರಣ್, ಎ.ಎಸ್. ಟಾಟು ಮೊಣ್ಣಪ್ಪ, ಮುಕ್ಕಾಟಿರ ಸಂದೀಪ್ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.