ಕುಶಾಲನಗರ, ಡಿ. 17: ಕುಶಾಲನಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಬಿ.ಬಿ. ಸಾವಿತ್ರಿ ಅವರು ಮುಂಬಡ್ತಿ ಹೊಂದಿ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಯ ಹಿರಿಯ ಉಪನ್ಯಾಸಕರಾಗಿ ನೇಮಕಗೊಂಡಿದ್ದಾರೆ.
ಕೂಡಿಗೆ ಡಯಟ್ ಸಂಸ್ಥೆಗೆ ಮುಂಬಡ್ತಿ ಹೊಂದಿದ ಕಾರಣ ಬಿ.ಬಿ. ಸಾವಿತ್ರಿ ಬುಧವಾರ ಶಾಲೆಯಿಂದ ಬಿಡುಗಡೆ ಹೊಂದಿ ಡಯಟ್ ಸಂಸ್ಥೆಯಲ್ಲಿ ಕರ್ತವ್ಯಕ್ಕೆ ಹಾಜರಾದರು. ತೆರವಾದ ಪ್ರೌಢಶಾಲೆಯ ಉಪ ಪ್ರಾಂಶುಪಾಲರ ಹುದ್ದೆಯ ಕಾರ್ಯಭಾರವನ್ನು ಶಾಲೆಯ ಹಿರಿಯ ಶಿಕ್ಷಕ ಎ.ಸಿ. ಮಂಜುನಾಥ್ ಅವರಿಗೆ ಹಸ್ತಾಂತರಿಸಿದರು.