ಶ್ರೀಮಂಗಲ, ಡಿ. 17: ಕೊಡವ ಪದ್ಧತಿ, ಸಂಸ್ಕøತಿ, ಭಾಷೆ, ಕಲೆ, ಸಾಹಿತ್ಯ, ಹಬ್ಬ, ಉಡುಗೆ, ಜನಪದಗಳಿಗೆ ಹೆಚ್ಚು ಒತ್ತು ನೀಡುವುದರೊಂದಿಗೆ ಚಂಗ್ರಾಂದಿ-ಪತ್ತಲೋದಿ ಕಾರ್ಯಕ್ರಮವನ್ನು ಹತ್ತು ದಿನಗಳವರೆಗೆ ಜನೋತ್ಸವದಂತೆ ನಡೆಸುತ್ತಿದ್ದು, ನಮ್ಮ ಕೊಡವ ಸಮಾಜವು ವಿಭಿನ್ನತೆಯೊಂದಿಗೆ ಬೆಳವಣಿಗೆ ಕಾಣುತ್ತಿದ್ದು, ಸರ್ವ ಸದಸ್ಯರ ಸಹಕಾರ ಅತ್ಯವಶ್ಯವಾಗಿದೆ ಎಂದು ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಯಾಂಡಮಾಡ ಬೋಸು ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ಕೊಡವ ಸಮಾಜವು ಕೇವಲ ಮದುವೆ ಮಂಟಪಕ್ಕೆ ಮಾತ್ರ ಸೀಮಿತವಾಗದೆ ಕೊಡವ ಸಂಪ್ರದಾಯದ ಆಚರಣೆಗಳಿಗೆ ಹಾಗೂ ಯುವಜನಾಂಗಕ್ಕೆ ಕೊಡವ ಸಂಸ್ಕøತಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಕೊಡವ ಸಂಸ್ಕøತಿಯ ಬೆಳವಣಿಗೆಗೆ ಶ್ರಮಿಸುತ್ತಿದೆ. ಇದರೊಂದಿಗೆ ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಮದುವೆ, ಇನ್ನಿತರ ಕಾರ್ಯಕ್ರಮಗಳನ್ನು ನಡೆಸಲು ಬೇಕಾದ ಎಲ್ಲಾ ವ್ಯವಸ್ಥೆಗಳು ನಮ್ಮ ಕೊಡವ ಸಮಾಜದಲ್ಲಿದ್ದು, ನಾಡಿನ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಿದರು.

ಈ ಸಂದರ್ಭ 10ನೇ ತರಗತಿಯ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದ ಕೊಡವ ಸಮಾಜದ ಸದಸ್ಯರ ಮಕ್ಕಳಿಗೆ ದಾನಿಗಳಾದ ಕೈಬಿಲೀರ ಪಾರ್ವತಿ ಬೋಪಯ್ಯ ಅವರು ತಮ್ಮ ಪತಿ ಮಾಜಿ ನಾಡ್‍ತಕ್ಕರಾದ ದಿ. ಬೋಪಯ್ಯ ಅವರ ಜ್ಞಾಪಕಾರ್ಥವಾಗಿ ಸ್ಥಾಪಿಸಿದ ದತ್ತಿ ನಿಧಿಯಲ್ಲಿ ಬಹುಮಾನ ನೀಡಲಾಯಿತು.

ಪ್ರಥಮ ಬಹುಮಾನವನ್ನು ಮಾಣೀರ ವರ್ಷ ಮುತ್ತಮ್ಮ, ದ್ವಿತೀಯ ದೇಯಂಡ ಅಯ್ಯಪ್ಪ, ತೃತೀಯ ಮುಕ್ಕಾಟಿರ ಚಿನ್ಮಯಿ ಗಂಗಮ್ಮ, ನಾಲ್ಕನೇ ಬಹುಮಾನ ಅನ್ವಿತ ಬಿದ್ದಪ್ಪ ಪಡೆದುಕೊಂಡರು.

ಈ ಸಂದರ್ಭ ಮಾತನಾಡಿದ ಕೈಬಿಲೀರ ಪಾರ್ವತಿ ಬೋಪಯ್ಯ, ಕೊಡವ ಸಂಸ್ಕøತಿ, ಪದ್ಧತಿಯ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿ ಕೊಡವ ಸಂಸ್ಕøತಿಯ ಬಗ್ಗೆ ಒಲವು ಮೂಡುವಂತೆ ಮಾಡಲು ಪೋಷಕರು ಹಾಗೂ ಕೊಡವ ಸಮಾಜ ಹಾಗೂ ಇತರ ಸಂಘ-ಸಂಸ್ಥೆಗಳೂ ಪ್ರಯತ್ನಿಸ ಬೇಕೆಂದು ಸಲಹೆ ನೀಡಿದರು. ಈ ಸಂದರ್ಭ ಕೊಡವ ಸಮಾಜದ ಉಪಾಧ್ಯಕ್ಷ ಮಾಣೀರ ಎಂ. ವಿಜಯ ನಂಜಪ್ಪ, ಕಾರ್ಯದರ್ಶಿ ಮನ್ನೇರ ಎ. ರಮೇಶ್, ಖಜಾಂಚಿ ಚೊಟ್ಟೆಯಂಡಮಾಡ ವಿಶುರಂಜಿ, ಕ್ರೀಡೆ ಹಾಗೂ ಸಾಂಸ್ಕøತಿಕ ಸಮಿತಿಯ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ, ನಿರ್ದೇಶಕರುಗಳಾದ ತಡಿಯಂಗಡ ಕರುಂಬಯ್ಯ, ಆಂಡಮಾಡ ಸತೀಶ್, ಚಂಗುಲಂಡ ಆಶ್ವಿನಿ, ಮನ್ನೇರ ಕಾವೇರಮ್ಮ, ನಾಡ್‍ತಕ್ಕರಾದ ಕೈಬಿಲೀರ ಹರೀಶ್ ಅಪ್ಪಯ್ಯ, ಸಾಂಸ್ಕøತಿಕ ಸಲಹೆಗಾರ ಚೆಟ್ಟಂಗಡ ರವಿ ಸುಬ್ಬಯ್ಯ ಉಪಸ್ಥಿತರಿದ್ದರು.