ಮಡಿಕೇರಿ, ಡಿ. 17: ವಿಶಿಷ್ಟ ರೀತಿಯ ಧಾರ್ಮಿಕ ಉತ್ಸವಗಳಿಗೂ ಕೊಡಗು ಜಿಲ್ಲೆ ಹೆಸರುವಾಸಿಯಾಗಿದೆ. ಜಿಲ್ಲೆ ರಾಜ್ಯದ ಇತರೆಡೆಗಳಿಗಿಂತ ತುಸು ವಿಭಿನ್ನವಾಗಿಯೇ ಎಲ್ಲಾ ರೀತಿಯಲ್ಲೂ ಪರಿಗಣಿಸಲ್ಪಟ್ಟಿದೆ. ಇಲ್ಲಿ ಸಂಸ್ಕøತಿ - ಸಂಪ್ರದಾಯದ ಪರಿಪಾಲನೆಯೊಂದಿಗೆ ಧಾರ್ಮಿಕ ಆಚರಣೆಗಳಿಗೂ ವಿಶೇಷ ಒತ್ತು ನೀಡಲಾಗುತ್ತದೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಜರುಗುವ ಹಲವು ದೇವಾಲಯಗಳ ವಾರ್ಷಿಕ ಉತ್ಸವಗಳು ಮಡಿಕೇರಿ, ಡಿ. 17: ವಿಶಿಷ್ಟ ರೀತಿಯ ಧಾರ್ಮಿಕ ಉತ್ಸವಗಳಿಗೂ ಕೊಡಗು ಜಿಲ್ಲೆ ಹೆಸರುವಾಸಿಯಾಗಿದೆ. ಜಿಲ್ಲೆ ರಾಜ್ಯದ ಇತರೆಡೆಗಳಿಗಿಂತ ತುಸು ವಿಭಿನ್ನವಾಗಿಯೇ ಎಲ್ಲಾ ರೀತಿಯಲ್ಲೂ ಪರಿಗಣಿಸಲ್ಪಟ್ಟಿದೆ. ಇಲ್ಲಿ ಸಂಸ್ಕøತಿ - ಸಂಪ್ರದಾಯದ ಪರಿಪಾಲನೆಯೊಂದಿಗೆ ಧಾರ್ಮಿಕ ಆಚರಣೆಗಳಿಗೂ ವಿಶೇಷ ಒತ್ತು ನೀಡಲಾಗುತ್ತದೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಜರುಗುವ ಹಲವು ದೇವಾಲಯಗಳ ವಾರ್ಷಿಕ ಉತ್ಸವಗಳು ರಹಿತವಾಗಿ ಸರಳವಾಗಿಯಾದರೂ ವಾರ್ಷಿಕ ಆಚರಣೆಯನ್ನು ನಡೆಸಲು ಸರ್ವರೂ ಕಟಿಬದ್ಧರಾಗಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಗ್ರಾಮದೇವರ ಉತ್ಸವಗಳು ಆರಂಭಗೊಂಡಿದ್ದು, ಕೆಲವೆಡೆ ಆಚರಣೆಗಳ ಮುಕ್ತಾಯವೂ ಆಗಿದ್ದರೆ, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಧಾರ್ಮಿಕ ಆಚರಣೆಗಳು ಪ್ರಾರಂಭವಾಗುವದರಲ್ಲಿದೆ, ಇದೀಗ ಸುಬ್ರಹ್ಮಣ್ಯ ಷಷ್ಠಿ ಉತ್ಸವವೂ ಎದುರಾಗಿದೆ. ಹಿಂದೂ ದೇವಾಲಯಗಳಲ್ಲಿನ ಆಚರಣೆಗಳು ಒಂದೆಡೆಯಾದರೆ ಮುಸ್ಲಿಮರು ಆಚರಿಸುವ ಉರೂಸ್ ಸಮಾರಂಭಗಳಿಗೂ ಈಗಾಗಲೇ ದಿನ ನಿಗದಿಪಡಿಸಲಾಗುತ್ತಿದೆ. ಕೆಲವೆಡೆಗಳಲ್ಲಿ ಉರೂಸ್ ಕಾರ್ಯಕ್ರಮ, ಜಿಲ್ಲೆಯಲ್ಲಿನ ಸಂಪ್ರದಾಯದಂತೆ ಹಿಂದೂಗಳ ಪಾಲ್ಗೊಳ್ಳುವಿಕೆಯೊಂದಿಗೂ ಆಚರಿಸಲ್ಪಡುತ್ತದೆ. ಉದಾಹರಣೆಗೆ ಎಮ್ಮೆಮಾಡು, (ಮೊದಲ ಪುಟದಿಂದ) ಬಿ.ಶೆಟ್ಟಿಗೇರಿ, ಕುತ್ತುನಾಡುವಿನಂತಹ ಕಡೆ ಈ ಪರಿಪಾಲನೆ ಇದೆ. ಮುಂದಿನ ಕೆಲವು ತಿಂಗಳು ಅಲ್ಲಲ್ಲಿ ಉರೂಸ್ ಧಾರ್ಮಿಕ ಆಚರಣೆ ಜರುಗಲಿದೆ. ಇದೀಗ ಡಿಸೆಂಬರ್ ತಿಂಗಳು ಮುಕ್ತಾಯದ ಹಂತ ತಲುಪುತ್ತಿದ್ದು, ಕ್ರೈಸ್ತರು ಆಚರಿಸುವ ಪ್ರಮುಖ ಹಬ್ಬವಾದ ಕ್ರಿಸ್‍ಮಸ್‍ಗೂ ದಿನಗಣನೆ ಆರಂಭವಾಗಿದೆ. ಹಲವರು ಮನೆಗಳಲ್ಲಿ ಹಬ್ಬದ ಸ್ವಾಗತಕ್ಕಾಗಿ ಈಗಾಗಲೇ ‘ಸ್ಟಾರ್’ಗಳು ಕಂಡುಬರುತ್ತಿವೆ.

ಜಿಲ್ಲೆಯಲ್ಲಿ ತನ್ನದೇ ಆದ ವಿಶಿಷ್ಟತೆಗಳೊಂದಿಗೆ ಆಚರಣೆಯಾಗುವ ಕೆಲವು ಹಬ್ಬಗಳು ಈಗಾಗಲೇ ಶ್ರದ್ಧಾ-ಭಕ್ತಿಯಿಂದ ಮುಕ್ತಾಯಗೊಂಡಿದೆ. ಈ ಉತ್ಸವಗಳು ಕೇವಲ ದೈವಿಕ ಆರಾಧನೆ ಮಾತ್ರವಲ್ಲದೆ, ಇಲ್ಲಿನ ಜನಪದೀಯವಾದ ಸಾಂಸ್ಕøತಿಕ ತಳಕನ್ನೂ ಹೊಂದಿರುತ್ತವೆ. ವಿಶೇಷವಾಗಿ ಕೊಡವ ಸಮುದಾಯದವರು ಪರಿಪಾಲಿಸುವ ಬೊಳಕಾಟ್, ಪೀಲಿಯಾಟ್, ಕೊಂಬಾಟ್‍ನಂತಹ ಆಚರಣೆಗಳು ಕೂಡ ಕಟ್ಟುಪಾಡುವಿಗೆ ಒಳಪಟ್ಟು ಧಾರ್ಮಿಕ ಆಚರಣೆಯ ಕಳೆಯನ್ನು ಹೆಚ್ಚಿಸುತ್ತವೆ. ವಿವಿಧ ಬಗೆಯ ತೆರೆಗಳು, ಉತ್ಸವ ಮೂರ್ತಿಯ ದರ್ಶನ, ದೇವರ ಅವಭೃತ ಸ್ನಾನ ಇತ್ಯಾದಿಯೂ ವಿಶೇಷಗಳು.

ಕಾಕೋಟು ಪರಂಬುವಿನ ಶ್ರೀ ಕಾಲಭೈರವೇಶ್ವರ ಉತ್ಸವ, ವಿವಿಧ ದೈವಿಕ ಕೈಂಕರ್ಯಗಳೊಂದಿಗೆ ಮುಕ್ತಾಯವಾಗಿದೆ. ಇದರಂತೆ ಕೊಳಕೇರಿಯ ಶ್ರೀ ಭಗವತಿ ದೇವಸ್ಥಾನದ ಕೊಂಬಾಟ್ ಉತ್ಸವವೂ ನಿನ್ನೆ ಮುಕ್ತಾಯವಾಗಿದ್ದರೆ, ಮುಕ್ಕೋಡ್ಲುವಿನ ಕೋಟೆಬೆಟ್ಟ ಬೊಟ್ಲಪ್ಪ ಈಶ್ವರ ದೇವಾಲಯದ ಉತ್ಸವ ತಾ. 15 ರಂದು ಶ್ರದ್ಧಾ _ ಭಕ್ತಿಯಿಂದ ಸಂಪನ್ನಗೊಂಡಿದೆ. ಚೇರಂಬಾಣೆಯ ಪಾಕ ಶ್ರೀ ದುರ್ಗಾಪರಮೇಶ್ವರಿ ದೇವರ ಉತ್ಸವ, ಬೆಟ್ಟತ್ತೂರಿನ ಮಾದೂರಪ್ಪ ಉತ್ಸವಕ್ಕೂ ಒಂದೆರಡು ದಿನಗಳ ಹಿಂದೆ ತೆರೆ ಬಿದ್ದಿದೆ. ಪ್ರಸಿದ್ಧವಾದ ಬೇತುವಿನ ಮಕ್ಕಿಶಾಸ್ತಾವು ಹಬ್ಬವೂ ನಾಡಿದ್ದು, ಜರುಗಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಧಾರ್ಮಿಕ ಆಚರಣೆಗಳು ಅಲ್ಲಲ್ಲಿನ ಕಟ್ಟುಪಾಡು - ಸಂಪ್ರದಾಯಕ್ಕೊಳಪಟ್ಟಂತೆ ಜರುಗಲಿದ್ದು, ಜಿಲ್ಲೆಯಲ್ಲಿ ಹಲವು ತಿಂಗಳು ಧಾರ್ಮಿಕ ಆಚರಣೆಗಳ ಪರ್ವಕಾಲ ಕಂಡುಬರಲಿದೆ.

- ಶಶಿ ಸೋಮಯ್ಯ