ಸೋಮವಾರಪೇಟೆ ,ಡಿ. 14: ಸಮೀಪದ ಮಾದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕುಂಬೂರು ಸಂಖ್ಯೆ 1ರಲ್ಲಿ ಬಿಸಿಎಂ ಮಹಿಳೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಭಾರತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದೇ ವಾರ್ಡ್‍ಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಾವೇರಿ ಅವರು ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ ಜಾತಿ ದೃಡೀಕರಣ ಪತ್ರ ಲಗತ್ತಿಸದ ಹಿನ್ನೆಲೆ ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕøತಗೊಳಿಸಿದರು.
ಪರಿಣಾಮ ಒಂದು ವಾರ್ಡ್‍ಗೆ ಭಾರತಿ ಅವರ ನಾಮಪತ್ರ ಮಾತ್ರ ಅಂಗೀಕೃತಗೊಂಡ ಹಿನ್ನೆಲೆ ಅವಿರೋಧವಾಗಿ ಆಯ್ಕೆಯಾದಂತಾಗಿದೆ.
ಕಾಂಡನಕೊಲ್ಲಿ ಕ್ಷೇತ್ರದಿಂದ ಹಿಂದುಳಿದ ವರ್ಗ ಬಿ. ಮೀಸಲಾತಿಯಡಿ ಎಂ.ಜಿ. ಸೋಮಣ್ಣ ಅವಿರೋಧ ಆಯ್ಕೆಯಾಗಿದ್ದಾರೆ. ಇವರ ಸ್ಪರ್ಧಿಯಾಗಿದ್ದ ದಿವ್ಯ ಅವರ ನಾಮಪತ್ರದಲ್ಲಿ ಜಾತಿ ದೃಡೀಕರಣ ಪತ್ರ ಲಗತ್ತಿಸದ ಹಿನ್ನೆಲೆ ಅವರ ನಾಮಪತ್ರವನ್ನು ಅಸಿಂಧುಗೊಳಿಸಲಾಗಿದೆ.
ಮೂವತ್ತೊಕ್ಲು-1ನೇ ವಾರ್ಡ್‍ನಿಂದ ಪರಿಶಿಷ್ಟ ಪಂಗಡ ಮಹಿಳೆ ಮೀಸಲಾತಿಯಡಿ ಭಾಗೀರಥಿ ಓರ್ವರೇ ನಾಮಪತ್ರ ಸಲ್ಲಿಸಿದ್ದು, ಪ್ರತಿಸ್ಪರ್ಧಿ ಯಾರೂ ಇಲ್ಲದ ಹಿನ್ನೆಲೆ ಅವಿರೋಧ ಆಯ್ಕೆಯಾದಂತಾಗಿದೆ.