ಸೋಮವಾರಪೇಟೆ, ಡಿ. 14: ಪಟ್ಟಣದ ಎಂ.ಜಿ. ರಸ್ತೆ ನಿವಾಸಿ ಆದಾಯ ತೆರಿಗೆ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಟಿ.ಎ. ನಾಗೇಶ್ ಅವರು ಇದೀಗ ಇಲಾಖೆಯ ಉಪ ಆಯುಕ್ತರಾಗಿ ಬಡ್ತಿ ಹೊಂದಿದ್ದಾರೆ. ಬೆಂಗಳೂರಿನ ಕೃಷಿ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ 1988ರಲ್ಲಿ ವಾಣಿಜ್ಯ ತೆರಿಗೆ ಇಲಾಖೆಗೆ ಸೇರ್ಪಡೆಗೊಂಡ ಇವರು ಮಂಗಳೂರಿನಲ್ಲಿ ಪ್ರೊಬೇಷನರಿ ಮುಗಿಸಿದರು. ನಂತರ ಮಡಿಕೇರಿ, ಮಧುಗಿರಿ, ಬೆಂಗಳೂರು, ಬೆಳಗಾವಿ ಹಾಗೂ ಬಿಜಾಪುರ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಉಪ ಆಯುಕ್ತರಾಗಿ ನಿಯುಕ್ತಿಗೊಂಡಿದ್ದು, ಬಡ್ತಿಗೂ ಮುನ್ನ ಸಿಂಗಾಪುರದಲ್ಲಿ ಜಿಎಸ್‍ಟಿ ತರಬೇತಿಯನ್ನು ಪಡೆದಿದ್ದಾರೆ. ಇವರು ಪಟ್ಟಣದ ಎಂ. ಜಿ.ರಸ್ತೆ ನಿವಾಸಿ ಟಿ.ಸಿ.ಅಪ್ಪಸ್ವಾಮಿ ಮತ್ತು ದಿ. ವಿ.ವಿ. ಪಾರ್ವತಮ್ಮ ಅವರ ಪುತ್ರ.