*ಸಿದ್ದಾಪುರ, ಡಿ.13 : ಗ್ರಾ.ಪಂ ಚುನಾವಣೆ ಸಂಬಂಧ ಅಭ್ಯತ್ ಮಂಗಲದ ಎರಡನೇ ವಾರ್ಡ್‍ನಲ್ಲಿ ಒಂದೇ ಮನೆಯ ಮೂವರು ಸೊಸೆಯರು ಚುನಾವಣಾ ಕಣದಲ್ಲಿದ್ದಾರೆ. ಎಸ್‍ಟಿ ಮೀಸಲಾತಿಯ ವಾರ್ಡ್‍ನಲ್ಲೇ ಅರ್ಹ ಅಭ್ಯರ್ಥಿಗಳಿಲ್ಲದ ಕಾರಣ ವಾಲ್ನೂರು ಗ್ರಾಮದ ಲಿಂಗಪ್ಪ ಅಲ್ಮತಗೌಡ ಎಂಬವರ ಮೂವರು ಸೊಸೆ ಯಂದಿರನ್ನು ಮೂರು ಪಕ್ಷಗಳು ಕಣಕ್ಕಿಳಿಸಿವೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ರಾಜು ಅವರ ಪತ್ನಿ ದಮಯಂತಿ, ನಾಗಪ್ಪ ಅವರ ಪತ್ನಿ, ಗ್ರಾ.ಪಂ ಮಾಜಿ ಸದಸ್ಯೆ ಕಮಲಮ್ಮ ಕಾಂಗ್ರೆಸ್ ಬೆಂಬಲಿತ ಹಾಗೂ ಕೃಷ್ಣಪ್ಪ ಅವರ ಪತ್ನಿ, ಗ್ರಾ.ಪಂ ಮಾಜಿ ಅಧ್ಯಕ್ಷೆ ನಾಗರತ್ನ ಎಸ್‍ಡಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿದ್ದಾರೆ.