ಚೇರಂಬಾಣೆ, ಡಿ. 13: ಹರಕೆಯ ಹಬ್ಬ ಎಂದೇ ಪ್ರಸಿದ್ಧಿ ಪಡೆದ ಪಾಕ ಶ್ರೀ ದುರ್ಗಾ ಪರಮೇಶ್ವರಿ ದೇವರ ಉತ್ಸವವು ತಾ. 15ರಂದು ನಡೆಯಲಿದೆ. ಬೆಳಿಗ್ಗೆ ಮುಕ್ಕಾಟಿ ಐನ್‍ಮನೆಯಿಂದ ಭಂಡಾರ ಹೊರಡುವುದು. ಸಂಪ್ರದಾಯ ಪ್ರಕಾರ ಮಹಾಪೂಜೆ, ಮಂಗಳಾರತಿ ಜರುಗಲಿದೆ. ಕೋವಿಡ್-19 ಮಹಾಮಾರಿ ಕಾಯಿಲೆ ಇರುವ ಕಾರಣ ಸರಕಾರದ ಆದೇಶದಂತೆ 100-150 ಜನರನ್ನು ದೇವಸ್ಥಾನದ ಒಳಗೆ ಸೇರಲು ಅವಕಾಶ ಕೊಡುವಂತೆ ನಡೆಸಲಾಗು ವುದು ಎಂದು ತಕ್ಕ-ಮುಖ್ಯಸ್ಥರು, ಆಡಳಿತ ಮಂಡಳಿಯವರು ಹಾಗೂ ಊರಿನವರು ತಿಳಿಸಿದ್ದಾರೆ.