ಗೋಣಿಕೊಪ್ಪಲು, ಡಿ.13: ಶಿಸ್ತು ಹಾಗೂ ಸೇವಾ ಮನೋಭಾವದಿಂದ ಸಮಾಜಮುಖಿಯಾಗಿ ಸೇವಾದಳ ಸಂಘಟನೆ ಕಾರ್ಯೋನ್ಮುಖ ವಾಗಬೇಕೆಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೆÇನ್ನಣ್ಣ ಕರೆ ನೀಡಿದರು.
ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಮಹಿಳಾ ಸೇವಾದಳ ಘಟಕದ ವತಿಯಿಂದ ನಗರದÀ ಕಾಮತ್ ನವಮಿ ಸಭಾಂಗಣದಲ್ಲಿ ತಾಲೂಕು ಅಧ್ಯಕ್ಷೆ ಥೆರೆಸಾ ವಿಕ್ಟರ್ ಅಧ್ಯಕ್ಷತೆಯಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸಂಘಟನೆ ದೈಹಿಕ, ಮಾನಸಿಕ ತರಬೇತಿಗಳನ್ನು ಆಯೋಜನೆ ಮಾಡಬೇಕು. ಬಲಿಷ್ಠವಾಗಿ ಸೇವಾದಳ ಸಂಘಟನೆ ಯಾಗಬೇಕು ಎಂದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಕಾವೇರಪ್ಪ ಮಾತನಾಡಿ, 1926 ರಿಂದ ಆರಂಭಗೊಂಡ ಸೇವಾದಳ ಸಂಘಟನೆ ದೇಶದಲ್ಲಿ ಪ್ರಬಲವಾಗಿ ಬೆಳೆದಿದೆ. ಕೊಡಗು ಜಿಲ್ಲೆಯಲ್ಲಿ ಕೂಡ ಸಂಘಟನೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಶಿಸ್ತು ಬದ್ಧ ಸಂಘಟನೆಯಾಗಿ ಪಕ್ಷದ ಜೊತೆಗೆ ಚಟುವಟಿಕೆ ನಡೆಸುತ್ತಿದೆ ಎಂದರು.
ಕೇಂದ್ರ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿಲ್ಲ. ಕಾಫಿ, ಕರಿಮೆಣಸು ದರ ಕುಸಿದಿದೆ. ರೈತರು ಅತಂತ್ರ ಗೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರಿಗೆ ಉತ್ತಮ ಯೋಜನೆ ರೂಪಿಸಿ ರೈತಪರ ಸರ್ಕಾರವಾಗಿತ್ತು ಎಂದರು. ಜಿಲ್ಲಾ ಉಪಾಧ್ಯಕ್ಷೆ ಪ್ರೇಮಾ ಮಾತನಾಡಿದರು. ಇದೇ ಸಂದರ್ಭ ಸೇವಾದಳ ಸ್ವಯಂಸೇವಕರಿಗೆ ಸಮವಸ್ತ್ರವನ್ನು ವಿತರಿಸಲಾಯಿತು.
ಸಭೆಯಲ್ಲಿ ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ನಿಕಟಪೂರ್ವ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಜಿಲ್ಲಾ ಪಂಚಾಯತ್ ಸದಸ್ಯೆ ಪಂಕಜ, ಪಕ್ಷದ ಪ್ರಮುಖರಾದ ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಬಿ.ಎನ್ ಪ್ರಕಾಶ್, ಕಡೇಮಾಡ ಕುಸುಮಾ, ರಶೀದ್, ಮಂಜುಳಾ, ದಾಮೋದರ್, ಮಹದೇವ್, ಕರ್ಣರಾಜು, ಶಿವಕುಮಾರ್ ಇದ್ದರು.