ಕುಶಾಲನಗರ, ಕೂಡಿಗೆ, ಡಿ. 12: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡುಮಂಗಳೂರು ಗ್ರಾಪಂನ ಬಸವನತ್ತೂರು ಗ್ರಾಮದ ತಂಗಮ್ಮ ಎಂಬವರ ಮನೆಯಲ್ಲಿ 242 ಗ್ರಾಂ ಚಿನ್ನದ ಆಭರಣಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಂಗಮ್ಮ ಅವರ ತೋಟದ ರೈಟರ್ ಚಿಕ್ಕತ್ತೂರು ಗ್ರಾಮದ ನಿವಾಸಿ ದಯಾನಂದ ಅಲಿಯಾಸ್ ಕಾಡು (25) ಬಂಧಿತ ಆರೋಪಿ. ಆರೋಪಿ ಕಳವು ಮಾಡಿದ್ದ 4,15,000 ಬೆಲೆಬಾಳುವ ಒಟ್ಟು 242 ಗಾ ್ರಂ ಚಿನ್ನದ ಆಭರಣಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ತಂಗಮ್ಮ ಅವರ ಮನೆಯಲ್ಲಿ ಕಳೆದ 2 ತಿಂಗಳಿನಿಂದ ನಿರಂತರ ಚಿನ್ನದ ಆಭರಣಗಳು ಕಳುವಾಗುತ್ತಿದ್ದವು. ಈ ಬಗ್ಗೆ ತಂಗಮ್ಮ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಈ ಬಗ್ಗೆ ಮಾಹಿತಿ ಕಲೆಹಾಕಿದ ಕುಶಾಲನಗರ ಗ್ರಾಮಾಂತರ ಪೊಲೀಸರು, ತಂಗಮ್ಮ ಅವರ ತೋಟದ ರೈಟರ್‍ನ ಮೇಲೆ ಗುಮಾನಿ ಬಂದು ತೀವ್ರ ವಿಚಾರಣೆಗೆ ಒಳಪಡಿಸಲಾಗಿ, ಆತನು ನಡೆಸಿದ ಕುಕೃತ್ಯ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಆರೋಪಿಯನ್ನು ಪತೆ ್ತ ಹಚ್ಚಲಾಗಿದ್ದು, ಆತ ಕಳವು ಮಾಡಿದ್ದ 6 ಚಿನ್ನದ ಚೈನುಗಳು, 2 ಚಿನ್ನದ ಬಳೆಗಳು, 1 ಚಿನ್ನದ ಉಂಗುರ ಸೇರಿದಂತೆ ಎಲ್ಲಾ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.(ಮೊದಲ ಪುಟದಿಂದ) ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕ್ಷಮಾ ಮಿಶ್ರಾ, ಡಿವೈಎಸ್ಪಿ ಹೆಚ್.ಎಂ. ಶೈಲೇಂದ್ರ್ರ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಎಂ. ಮಹೇಶ್, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ಎಎಸ್‍ಐ ಸ್ವಾಮಿ, ಸಿಬ್ಬಂದಿಗಳಾದ ಶನಂತ, ಶ್ರೀನಿವಾಸ, ಸಾಫಿನ್ ಅಹ್ಮದ್, ಅಜಿತ್, ಪ ್ರವೀಣ, ಪ್ರಿಯಕುಮಾರ್ ಕಾರ್ಯಾಚರಣೆ ನಡೆಸಿ ಪ್ರಕರಣ ಬೇಧಿಸಿದ್ದು ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿರುವ ಪೊಲೀಸ್ ಅಧೀಕ್ಷಕರು ಕಾರ್ಯಾಚರಣೆ ತಂಡಕ್ಕೆ ನಗದು ಬಹುಮಾನವನ್ನು ಘೋಷಿಸಿದ್ದಾರೆ.