ವೀರಾಜಪೇಟೆ, ಡಿ. 13: ವೀರಾಜಪೇಟೆ-ಸಿದ್ದಾಪುರ ರಸ್ತೆಯ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ವರ್ಷಂಪ್ರತಿ ತಾ. 30 ರಿಂದ ಜನವರಿ 1 ರ ತನಕ ಆಚರಿಸಿಕೊಂಡು ಬರುತ್ತಿದ್ದ ಅಯ್ಯಪ್ಪ ಉತ್ಸವವನ್ನು ಕೋವಿಡ್-19 ಹಿನ್ನೆಲೆ ರದ್ದುಪಡಿಸಲು ದೇವಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ. ಜನವರಿ 1 ರಂದು ಮಹಾ ಪೂಜಾ ಸೇವೆ ನಂತರ ಅನ್ನದಾನ ಕಾರ್ಯಕ್ರಮ ಹಾಗೂ ರಾತ್ರಿ ಮೆರವಣಿಗೆ ಇರುವುದಿಲ್ಲ. ತಾ. 1 ರಂದು ಬೆಳಿಗ್ಗೆ 6.30 ಗಂಟೆಗೆ ಗಣಪತಿ ಹೋಮ, 12 ಗಂಟೆಗೆ ಸಾಂಪ್ರದಾಯದಂತೆ ಪೂಜೆ ನೆರವೇರಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.