ಸೋಮವಾರಪೇಟೆ, ಡಿ. 13: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ವಿತರಿಸಲಾಯಿತು.
ಕಿಟ್‍ಗಳನ್ನು ವಿತರಿಸಿದ ಯೋಜನೆಯ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಮಾತನಾಡಿ, ಹಿರಿಯರನ್ನು ಗೌರವಿಸುವ ಹಾಗೂ ಅವರ ಯೋಗ-ಕ್ಷೇಮಗಳಿಗೆ ಪೂರಕವಾಗಿ ಡಾ. ವೀರೇಂದ್ರ ಹೆಗ್ಗಡೆಯವರ ವಿಶೇಷ ಕಾಳಜಿಯಂತೆ ವಾತ್ಸಲ್ಯ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದರು.
ಯೋಜನೆಯ ವತಿಯಿಂದ ತಾಲೂಕಿನಲ್ಲಿ 90ಕ್ಕೂ ಹೆಚ್ಚು ಮಂದಿಗೆ ಮಾಸಾಶನ ನೀಡಲಾಗುತ್ತಿದ್ದು, ಅದರೊಂದಿಗೆ ನಿತ್ಯೋಪಯೋಗಿ ಸಾಮಗ್ರಿಗಳು, ಅಗತ್ಯ ಔಷಧ ಪೂರೈಕೆ, ಬಟ್ಟೆ ಕಪಾಟುಗಳು, ಚಾಪೆ, ಹೊದಿಕೆ ಇತ್ಯಾದಿ ಪರಿಕರಗಳನ್ನು ಫಲಾನುಭವಿಗಳ ಮನೆಗಳಿಗೆ ತಲುಪಿಸಲಾಗುತ್ತಿದೆ ಎಂದರು.
ಈ ಸಂದರ್ಭ ಯೋಜನೆಯ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ, ಸೇವಾಪ್ರತಿನಿಧಿ ಮಾಲತಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರುಗಳು ಹಾಜರಿದ್ದರು.